ಮೃತ ಕ್ಯಾಮರಾಮನ್ ಕುಟುಂಬಕ್ಕೆ ೫ ಲಕ್ಷ ರೂ. ನೆರವಿನ ಆದೇಶ ಪತ್ರ ಹಸ್ತಾಂತರ

ಚಾಮರಾಜನಗರ : ಚಾಮರಾಜನಗರ ಪತ್ರಕರ್ತರ ಸಂಘದ ಸಭಾಂಗಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ,
ಇತ್ತೀಚೆಗೆ ಮೃತಪಟ್ಟ ನ್ಯೂಸ್ ಫಸ್ಟ್ ಟಿವಿ ಕ್ಯಾಮರಾಮೆನ್ ಸೆಲ್ವರಾಜ್ ಅವರ ತಾಯಿ ಜಯಮ್ಮ ಅವರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಂಜೂರು ಮಾಡಿದ 5 ಲಕ್ಷ ರೂ ನೆರವಿನ ಮಂಜೂರು ಆದೇಶ ಪತ್ರವನ್ನು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು ಅವರು ಹಸ್ತಾಂತರಿಸಿದರು. ಇದೇ ಸಂದರ್ಭದಲ್ಲಿ ಪತ್ರಕರ್ತರ ಆಪತ್ಬಾಂಧವ ನಿಧಿಯಿಂದ 19 ಸಾವಿರ ನೆರವಿನ ಚೆಕ್ ಕೂಡ ನೀಡಲಾಯಿತು.
ಚಾಮರಾಜನಗರ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ದೇವರಾಜ ಕಪ್ಪಸೋಗೆ, ರಾಜ್ಯ ಸಮಿತಿ ಸದಸ್ಯರಾದ ಎಡಿಸಿಲ್ವಾ ಹಾಜರಿದ್ದರು.

Please follow and like us:
error