ಮುಖ್ಯಮಂತ್ರಿಯಿಂದ ಭರ್ಜರಿ ರೋಡ್ ಶೋ

cm-siddaramayyaಮೈಸೂರು, ಮಾ.31: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಭರ್ಜರಿ ರೋಡ್ ಶೋ ಮೂಲಕ ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಆರಂಭಿಸಿದರು.

ಬೆಳಗ್ಗೆ 9 ಗಂಟೆಗೆ ರಾಮಕೃಷ್ಣ ನಗರದ ನಿವಾಸದಿಂದ ಹೊರಟ ಮುಖ್ಯಮಂತ್ರಿ, ಮೊದಲಿಗೆ ನಂಜನಗೂಡು ಪಟ್ಟಣದಲ್ಲಿರುವ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಮುಖಂಡರೊಂದಿಗೆ ಮಾತುಕತೆ ನಡೆಸಿದರು.

ನಂತರ ಗೂಳೂರು ಗ್ರಾಮಕ್ಕೆ ತೆರಳಿದ ಮುಖ್ಯಮಂತ್ರಿ, ಪ್ರಚಾರ ಕಾರ್ಯಕ್ರಮವನ್ನು ಅಧಿಕೃತವಾಗಿ ಆರಂಭಿಸಿದರು. ಗ್ರಾಮದಲ್ಲಿ ಪಾದಯಾತ್ರೆ ನಡೆಸಿದ ಅವರು, ನೆರೆದಿದ್ದ ಜನರನ್ನುದ್ದೇಶಿಸಿ ಮಾತನಾಡಿದರಲ್ಲದೆ, ಕಾಂಗ್ರೆಸ್ ಅಭ್ಯರ್ಥಿ ಕಳಲೆ ಕೇಶವಮೂರ್ತಿ ಅವರಿಗೆ ಮತ ನೀಡುವಂತೆ ಮನವಿ ಮಾಡಿದರು. ಚಿನ್ನದಗುಡಿ ಹುಂಡಿ ಗ್ರಾಮದಲ್ಲೂ ಸಿಎಂ ಅವರ ಪ್ರಚಾರ ಕಾರ್ಯ ನಡೆಯಿತು.

ನಂತರ ಮುಖ್ಯಮಂತ್ರಿಯವರ ರೋಡ್ ಶೋ ಆರಂಭವಾಯಿತು. ದಾರಿಯುದ್ದಕ್ಕೂ ಕಾರ್ಯಕರ್ತರು, ಗ್ರಾಮಸ್ಥರು ಹರ್ಷೋದ್ಗಾರದೊಂದಿಗೆ ಸಿಎಂ ಅವರಿಗೆ ಸ್ವಾಗತ ಕೋರಿದರು. ಬದನವಾಳು ಗ್ರಾಮಸ್ಥರು ಪಟಾಕಿ ಸಿಡಿಸಿ ಸಿದ್ದರಾಮಯ್ಯರನ್ನು ಬರಮಾಡಿಕೊಂಡರು. ದೇವನೂರು ಗ್ರಾಮದಲ್ಲಿ ಪ್ರಚಾರ ನಡೆಸಿದ ಸಿಎಂ, ಅಲ್ಲಿಯ ಗುರು ಮಲ್ಲೇಶ್ವರ ಮಠಕ್ಕೂ ಭೇಟಿ ನೀಡಿದ್ದರು.

Please follow and like us:

Leave a Reply