ಮುಂಗಾರು ಹಂಗಾಮು : ಸಿಂಧನೂರಿನಲ್ಲಿ ಕೊಪ್ಪಳ ಮತ್ತು ರಾಯಚೂರು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ


ರಾಯಚೂರು- ಸಿಂಧನೂರು ನಗರದ ಹೊಸ ಐಬಿ ಸ್ಥಳದ ಕುರಿತು ಹಾಗೂ ೨೦೨೦ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗೆ ಸಂಬAಧಪಟ್ಟ ಟಿಎಲ್‌ಬಿಸಿ ಕಾಲುವೆಯಿಂದ ನೀರು ಬಿಡುವ ವ್ಯವಸ್ಥೆ ಸುಗಮವಾಗಿ ಪೊಲೀಸ್ ರಕ್ಷಣೆಯೊಂದಿಗೆ ಮಾಡುವುದು. ಕಾಲುವೆಯ ಎಡಭಾಗದಲ್ಲಿ ಅನಧಿಕೃತ ನೀರು ತೆಗೆಯುವವರ ವಿರುದ್ಧ ಕ್ರಮ ಕೈಗೊಳ್ಳಲು ನಿರ್ದೇಶನಗಳನ್ನು ನೀಡಲಾಗಿದೆ.
ಈ ನಿಟ್ಟಿನಲ್ಲಿ ೨೦೨೦ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕಾಲುವೆಯಿಂದ ಸುಗಮವಾಗಿ ನೀರು ಬಿಡುವ ಕುರಿತಾಗಿ ಚರ್ಚಿಸಲು ಸಂಬAಧಪಟ್ಟ ಕಂದಾಯ, ಪೊಲೀಸ್, ನೀರಾವರಿ, ವಿದ್ಯುತ್, ಪಂಚಾಯತ್ ರಾಜ್, ಪೌರಾಡಳಿತ ಇಲಾಖೆಗಳ ಅಧಿಕಾರಿಗಳೊಂದಿಗೆ ರಾಯಚೂರು ಮತ್ತು ಕೊಪ್ಪಳ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ೨೦೨೦ರ ೪ರ ಶನಿವಾರದಂದು ಬೆಳಿಗ್ಗೆ ೧೧ ಗಂಟೆಗೆ ಸಿಂಧನೂರಿನ ಎಲೆಮಂಚಾಲಿ ವಾಸುದೇವರಾವ್ ಕಲ್ಯಾಣ ಮಂಟಪದಲ್ಲಿ ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಪರ ಜಿಲ್ಲಾಧಿಕಾರಿಯವರು ತಿಳಿಸಿದ್ದಾರೆ.


Please follow and like us:
error