ಮೀಸಲಾತಿ ಪಟ್ಟಿ ರದ್ದುಗೊಳಿಸಿದ ಹೈಕೋರ್ಟ್: ಮೇಲ್ಮನವಿಗೆ ಸರಕಾರಕ್ಕೆ ೧೦ ದಿನಗಳ ಕಾಲಾವಕಾಶ

ಬೆಂಗಳೂರು : ರಾಜ್ಯ ಸರ್ಕಾರ ನಗರಸಭೆ , ಪುರಸಭೆ ಪಟ್ಟಣ ಪಂಚಾಯ್ತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲಾತಿ ಪಟ್ಟಿ ಪ್ರಕಟಿಸಿ , ಅಧಿಸೂಚನೆ ಹೊರಡಿಸಿತ್ತು. ಅದರೆ ಈಗ ಅಧಿಸೂಚನೆಯನ್ನು ರದ್ದುಪಡಿಸಿ ರಾಜ್ಯ ಹೈಕೋರ್ಟ್ ಆದೇಶಿಸಿದೆ . ಅಲ್ಲದೇ 4 ವಾರಗಳಲ್ಲಿ ಹೊಸ ಮೀಸಲಾತಿ ಪಟ್ಟಿಯನ್ನು ಪ್ರಕಟಿಸುವಂತೆ ಸರ್ಕಾರಕ್ಕೆ ಆದೇಶಿಸಿದೆ . ಸರ್ಕಾರದ ಅಧಿಸೂಚನೆಯಂತೆ ಹಲವೆಡೆ ಅಧ್ಯಕ್ಷ , ಉಪಾಧ್ಯಕ್ಷರನ್ನು ಆಯ್ಕೆ ಕೂಡ ಮಾಡಲಾಗಿತ್ತು . ಆದರೆ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಿರಲಿಲ್ಲ. ಈ ಆದೇಶದ ವಿರುದ್ದ ಮೇಲ್ಮನವಿ ಸಲ್ಲಿಸಲು ಸರಕಾರಕ್ಕೆ ೧೦ ದಿನಗಳ ಕಾಲಾವಕಾಶ ನೀಡಿದೆ.

Please follow and like us:
error