‘ಮಿಲನ’ ಖ್ಯಾತಿಯ ಹಿರಿಯ ನಟ ಸುರೇಶ್ ಇನ್ನಿಲ್ಲ.

Suresh_mangaluru_dis_47844ಮೂಲತ: ಮಂಗಳೂರಿನವರಾದ ಸುರೇಶ್ ಕೆಲವು ದಿನಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಟೆಲಿಕಾಂ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ ಸುರೇಶ್ ಸ್ವಯಂ ನಿವೃತ್ತಿ ಪಡೆದು ನಾಟಕ, ಧಾರಾವಾಹಿ, ಸಿನೆಮಾಗಳಲ್ಲಿ ಹೆಚ್ಚು ಬ್ಯುಸಿಯಾಗಿದ್ದರು. ಕೆ. ಎನ್. ಟೇಲರ್, ದೇವದಾಸ್ ಕಾಪಿಕಾಡ್ ಅವರ ತಂಡಗಳಲ್ಲದೆ ಇನ್ನಿತರ ಕೆಲವು ತಂಡಗಳಲ್ಲಿ ಅವರು ಬಣ್ಣ ಹಚ್ಚಿದ್ದರು. ಮಿಲನ, ತಾಜ್’ಮಹಲ್, ದೃಶ್ಯ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದರು. ನಿರ್ದೇಶಕ ಆರ್. ಚಂದ್ರು ಅವರ ಸಿನಿಮಾಗಳಲ್ಲಿ ಅವರಿಗೆ ಒಂದು ಪಾತ್ರ ಇದ್ದೇ ಇರುತ್ತಿತ್ತು.

Please follow and like us:

Related posts

Leave a Comment