ಮಾ. ೩ ರಂದು ವೀರಶೈವ ಮಹಾಸಭಾ ರಾಜ್ಯ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ

ಕೊಪ್ಪಳ, ಫೆ. ೨೮ : ಅಖಿಲ ಭಾರತ ವೀರಶೈವ ಮಹಾಸಭಾ ಬೆಂಗಳೂರು ಇದರ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಮಾರ್ಚ್ ೦೩ ರಂದು ಚುನಾವಣೆ ನಡೆಯಲಿದೆ.
ರಾಜ್ಯಾಧ್ಯಕ್ಷ ಸ್ಥಾನಕ್ಕೆ ಶ್ರೀ ತಿಪ್ಪಣ್ಣ ಎನ್. ಮತ್ತು ಶ್ರೀ ಪುಟ್ಟಬುದ್ಧಿ ಎನ್. ಇವರು ಸ್ಪರ್ಧಿಸಿದ್ದಾರೆ. ದಿನಾಂಕ : ೦೩.೦೩.೨೦೧೯ ಬೆಳಿಗ್ಗೆ ೮:೦೦ ಗಂಟೆಯಿಂದ ಮಧ್ಯಾಹ್ನ ೪:೦೦ ಗಂಟೆ ವರೆಗೆ ಕೊಪ್ಪಳ ನಗರದ ಅಶೋಕ ವೃತ್ತದ ಬಳಿಯಿರುವ ಬಿಇಓ ಕಛೇರಿ ಹತ್ತಿರವಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಚುನಾವಣೆಗೆ ಏರ್ಪಡಿಸಲಾಗಿದೆ. ಮತದಾರರು ಸದರಿ ಸ್ಥಳದಲ್ಲಿ ಬಂದು ಮತದಾನ ಮಾಡಬಹುದು. ಮಹಾಸಭಾದ ಉಪಪೋಷಕರು ಆಗಿರುವವರು ರೂ. ೨,೫೦೦/- ಹಾಗೂ ಅದಕ್ಕೂ ಮೇಲ್ಪಟ್ಟು ಹಣ ಸಂದಾಯ ಮಾಡಿ ಸದಸ್ಯರಾಗಿದ್ದು, ಮತದಾರರ ಪಟ್ಟಿಯಲ್ಲಿ ಹೆಸರಿರುವವರು ಈ ಮತದಾನದಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ. ಸದಸ್ಯರು ಸಾಮಾನ್ಯ ಚುನಾವಣೆಯಲ್ಲಿ ಬಳಕೆಯಾಗುವ ಗುರುತಿನ ಚೀಟಿ ಅಥವಾ ಇತರೆ ಇಲಾಖೆಗಳಿಂದ ನೀಡಿರುವ ಭಾವಚಿತ್ರಸಹಿತ ಇರುವ ಗುರುತಿನ ಚೀಟಿ ಹಾಜರುಪಡಿಸಿ ಮತದಾನ ಮಾಡಬಹುದಾಗಿದೆ ಎಂದು ವೀರಶೈವ ಮಹಾಸಭಾ ಚುನಾವಣಾ ಅಧಿಕಾರಿಯಾಗಿ ನಿಯುಕ್ತಿಗೊಂಡಿರುವ ಪ್ರೊ. ಅಲ್ಲಮಪ್ರಭು ಬೆಟ್ಟದೂರು(೯೮೪೪೦೪೯೨೦೫)  ತಿಳಿಸಿದ್ದಾರೆ.