fbpx

ಮಾಸ್ಕ್ ಧರಿಸಿ,ಸಾಮಾಜಿಕ ಅಂತರ ಕಾಪಾಡಿಕೊಳ್ಳಿ- ನಟ ಪುನಿತ್ ರಾಜ್ ಕುಮಾರ್ ಕರೆ

ಗಂಗಾವತಿ : ಕೋವಿಡ್ ೧೯ ಸಾಮಾನ್ಯ ಜ್ವರದಂತೆ ಆದರೆ ನಿರ್ಲಕ್ಷ್ಯ ಮಾಡಿದರೆ ಡೆಂಜರಸ್ ಇದರಿಂದಾಗಿ ಸಾವುಗಳಾಗಿವೆ. ಕರೋನಾ ವಿರುದ್ಧ ಹೋರಾಡುತ್ತಿರುವ ವೈದ್ಯರು, ಪೋಲಿಸರ ಜೀವ ನಾವು ಕಾಪಾಡಬೇಕಾದರೆ ನಿಯಮಗಳನ್ನು ಪಾಲಿಸಬೇಕು. ಎಲ್ರೂ ಆಚೆಗೆ ಹೋದಾಗ ಮಾಸ್ಕ್ ಹಾಕಿಕೊಳ್ಳಿ ಎಂದು ನಟ ಪುನಿತ್ ರಾಜಕುಮಾರ್ ಕರೆ ನೀಡಿದರು. ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಶೂಟಿಂಗ್ ನಲ್ಲಿರುವ ಅವರು ಗಂಗಾವತಿ ಗ್ರಾಮೀಣ ಠಾಣೆಯವರು ಹಮ್ಮಿಕೊಂಡಿದ್ದ ಕರೋನಾ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ಗ್ರಾಮೀಣ ಠಾಣೆಯ ಪಿಎಸೈ ದೊಡ್ಡಪ್ಪ ಜೆ, ಕನಕಗಿರಿ ಠಾಣೆಯ ಪಿಎಸೈ ಪ್ರಶಾಂತ ಸೇರಿದಂತೆ ಸಿಬ್ಬಂದಿಗಳು ಹಾಜರಿದ್ದರು.

Please follow and like us:
error
error: Content is protected !!