ಮಾಸ್ಕ್ ಧರಿಸದ, ನಿಯಮ ಉಲ್ಲಂಘಿಸಿದವರಿಂದ 11.93 ಲಕ್ಷ ದಂಡ ವಸೂಲಿ ಮಾಡಿದ ಪೋಲಿಸರು

ಕೊಪ್ಪಳ : ಅತೀ ಹೆಚ್ಚು ಕರೋನಾ ಪಾಜಿಟಿವ್ ಪ್ರಕರಣಗಳು ದಾಖಲಾಗುತ್ತಿರುವ ಜಿಲ್ಲೆಯಲ್ಲಿ ಸಾರ್ವಜನಿಕ ರಲ್ಲಿ ಜಾಗೃತಿ ಮೂಡಿಸಲು ದಂಡ ವಿಧಿಸಲಾಗುತ್ತಿದೆ. ಜಿಲ್ಲೆಯಲ್ಲು ಕಳೆದ ೧೦ ದಿನಗಳಲ್ಲಿ ೧೧.೯೩ ಲಕ್ಷ ದಂಡ ವಸೂಲಿ ಮಾಡಲಾಗಿದೆ. ಈ ಕುರಿತು ಜಿಲ್ಲಾ ಎಸ್ಪಿ ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಸಹಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಬಗ್ಗೆ ಪ್ರಸ್ತಾಪಿಸುತ್ತಾ , ಸೋಂಕಿಗೆ ಕಡಿವಾಣ ಹಾಕಲು ಮಾಸ್ಕ್ ಧರಿಸುವುದು . ಸಾಮಾಜಿಕ ಅಂತರ ಕಾಪಾಡುವುದು . ಸಾರ್ವಜನಿಕ ಸ್ಮಳಗಲ್ಲಿ ಉಗುಳುವದು , ಮದ್ಯಪಾನ , ಗುಜ್ಯಾ ಜಗಿಯುವ ವ್ಯಕ್ತಿಗಳ ವಿರುದ್ದ ದಂಡ ವಿಧಿಸಲು ಹಾಗೂ ಈ ಕುರಿತು ಜಾಗೃತಿ ಮೂಡಿಸಿ ಸೋಂಕಿಗೆ ಕಡಿವಾಣ ಹಾಕಲು ಸೂಚನೆ ನೀಡಿದ್ದ ಪ್ರಕಾರ. ಕೊಪ್ಪಳ ಜಿಲ್ಲೆಯಲ್ಲಿ ಕೋವಿದ -19 ಸೋಂಕು ತಡೆಗಟ್ಟಲು ಕೊಪ್ಪಳ ಜಿಲ್ಲಾ ಪೊಲೀಸ್ ವತಿಯಿಂದ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. , ಜಿಲ್ಲಾ ವ್ಯಾಪ್ತಿಯಲ್ಲಿ ವಾಸ್ಕೃ ಧರಿಸದಿರುವ , ಸಾಮಾಜಿಕ ಅಂತರ ಕಾಪಾಡುವಲ್ಲಿ ವಿಫಲರಾದ . ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವ . ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ , ಗುಟ್ಕಾ ಮತ್ತು ತಂಬಾಕು ಸೇವ ಮಾಡಿ ಆದೇಶ ಉಲ್ಲಂಘನೆ ಮಾಡುವವರ ವಿರುದ್ದ ದಂಡ ವಿಧಿಸಲಾಗುತ್ತಿದ್ದು , ಕಳೆದ 10 ದಿನಗಳಲ್ಲಿ ಒಟ್ಟು 8578 ಪ್ರಕರಣಗಳಲ್ಲಿ ಒಟ್ಟು ರೂ 11.93.033 ದಂಡ ವಿಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ .

Please follow and like us:
error