ಮಾರ್ಚ ೨ರಿಂದ ಬಜೆಟ್ ಅಧಿವೇಶನ

ಬೆಂಗಳೂರು , ಡಿ . 30 : ಸಿಎಂ ವಿದೇಶ ಪ್ರವಾಸ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜ . 20ರಿಂದ ನಿಗದಿಯಾಗಿದ್ದ ಅಧಿವೇಶನದ ದಿನಾಂಕವನ್ನು ಮುಂದೂಡಿಕೆ ಮಾಡಲಾಗಿದೆ . ಫೆ . 17ರಿಂದ 21ರ ತನಕ ಜಂಟಿ ಅಧಿವೇಶನ ನಡೆಯಲಿದೆ . ಮಾ . 2ರಿಂದ ಬಜೆಟ್ ಅಧಿವೇಶನ ಆರಂಭವಾಗಲಿದ್ದು , ಮಾ . 

5ರಂದು ರಾಜ್ಯ ಬಜೆಟ್ ಮಂಡನೆಯಾಗಲಿದೆ ಎಂದು ಸಚಿವ ಜೆ . ಸಿ . ಮಾಧುಸ್ವಾಮಿ ತಿಳಿಸಿದ್ದಾರೆ . ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಾಧುಸ್ವಾಮಿ , ‘ ‘ 2020ರ ನ . 3 , 4 , 5 ರಂದು ಜಾಗತಿಕ ಹೂಡಿಕೆದಾರರ ಸಮಾವೇಶ ನಡೆಸಲು ಸಂಪುಟ ನಿರ್ಧರಿಸಿದೆ . ಕೆಪಿಎಸ್‌ಸಿಯ ಎ , ಬಿ ಗ್ರೂಪ್‌ನ ಆಯ್ದ ಕೆಲ ಹುದ್ದೆಗಳಿಗೆ ಸಂದರ್ಶನ ವಿಲ್ಲ . ಸಂದರ್ಶನ ಇಲ್ಲದೆ ಅಂಕ ಗಳಿಕೆಯ ಆಧಾರದಲ್ಲಿ ಉದ್ಯೋಗ ನೀಡಲಾಗುವುದು . ಯಾವ್ಯಾವ ಹುದ್ದೆ ಎನ್ನುವುದನ್ನು ಮುಂದಿನ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು ‘ ಎಂದು ಮಾಧುಸ್ವಾಮಿ ಹೇಳಿದ್ದಾರೆ

Please follow and like us:
error