ಮಾರುಕಟ್ಟೆ ಶುಲ್ಕ ಹೆಚ್ಚಳ ಖಂಡಿಸಿ ಟೆಂಡರ್‌ನ್ನು ಬಹಿಷ್ಕರಿಸಿ ವ್ಯಾಪಾರ ವಹಿವಾಟು ಸ್ಥಗೀತಗೊಳಿಸಿದ ವರ್ತಕರು

ಕೊಪ್ಪಳ : ಮಾರಕಟ್ಟೆ ಶುಲ್ಕವನ್ನು ದಿಢಿರ್‌ನೇ ಹೆಚ್ಚಿಸಿರುವುದನ್ನು ಪ್ರತಿಭಟಿಸಿ ಟೆಂಡರನ್ನು ಬಹಿಷ್ಕರಿಸಿ ವ್ಯಾಪಾರ ವಹಿವಾಟನ್ನು ಸ್ಥಗೀತಗೊಳಿಸಿದ್ದಾರೆ. ತಕ್ಷಣವೇ ಸರ್ಕಾರ ಮಾರುಕಟ್ಟೆ ಶುಲ್ಕವನ್ನು ಪರಿಷ್ಕರಿಸಿ ಶೇ.೦.೩೫ ಪೈಸೆಗೆ ಇಳಿಸಬೇಕೆಂದು ಶ್ರೀ ಗವಿಸಿದ್ದೇಶ್ವರ ದಲಾಲ ವರ್ತಕರ ಸಂಘ ಸೋಮವಾರದಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿ ಒತ್ತಾಯಿಸಿದೆ.
ರಾಜ್ಯದಲ್ಲಿ ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸೌಲಭ್ಯ ಅಧಿನಿಯಮ-೨೦೨೦ ರ) ಸುಗ್ರಿವಾಜ್ಞೆಯನ್ನು ಜಾರಿಗೊಳಿಸಿದ ನಂತರದಲ್ಲಿ ಮಾರುಕಟ್ಟೆ ಪ್ರಾಗಂಣ ಉಪ ಮಾರುಕಟ್ಟೆ ಪ್ರಾಂಗಣಗಳಲ್ಲಿ ನಡೆಯುವ ವ್ಯಾಪಾರ ವಹಿವಾಟು ಮಾತ್ರ ನಿಯಂತ್ರಣಕ್ಕೆ ಒಳಪಡುತ್ತಿದ್ದು, ಟ್ರೇಡ್ ಏರಿಯಾದ ವ್ಯಾಪಾರ ವಹಿವಾಟುವ ನಿಯಂತ್ರಣದಿಂದ ಮುಕ್ತಗೊಂಡಿರುವುದರಿಂದ ಸಹಜವಾಗಿ ಮಾರಾಟ ವ್ಯವಸ್ಥೆಯಲ್ಲಿ ಅಸಮತೋಲನ ಕಂಡುಬಂದಿದೆ.
ಟ್ರೇಡ್ ಏರಿಯಾದ (ಒಳಗೆ-ಹೊರಗೆ) ವ್ಯಾಪಾರ ವಹಿವಾಟನ್ನು ಮುಕ್ತಗೊಳಿಸಿ ಹಾಗೆ ಮಾರುಕಟ್ಟೆ ಪ್ರಾಂಗಣ ಮತ್ತು ಉಪಮಾರುಕಟ್ಟೆ ಪ್ರಾಂಗಣಗಳಲ್ಲಿಯ ವ್ಯಾಪಾರ ವಹಿವಾಟನ್ನು ಸಹಿತ ನಿಯಂತ್ರಣದಿಂದ ಮುಕ್ತಗೊಳಿಸಬೇಕು. ಅಥವಾ ರಾಜ್ಯದಲ್ಲಿ ನಡೆಯುವ ಕೃಷಿ ಉತ್ಪನ್ನಗಳ ಸಮಗ್ರ ವ್ಯಾಪಾರವನ್ನು ನಿಯಂತ್ರಣಕ್ಕೆ ಒಳಪಡಿಸಬೇಕೆಂದು ವರ್ತಕರ ಸಂಘ ಮನವಿಯಲ್ಲಿ ವಿನಂತಿಸಿದೆ.
ಈ ಸಂದರ್ಭದಲ್ಲಿ ವರ್ತಕರಾದ ಸೋಮರೆಡ್ಡಿ ಮಣ್ಣೂರು, ಶಿವಣ್ಣ ರಾಜೂರು, ಬೋಜಪ್ಪ ಕುಂಬಾರ, ಬಸವರಾಜ ಗಂಗಾವತಿ, ಬಸವರಾಜ ದೇವರಮನಿ, ಮಲ್ಲಣ್ಣ ಬಳ್ಳೊಳ್ಳಿ, ಪ್ರಭು ಹೆಬ್ಬಾಳ, ನೇಮಿರೆಡ್ಡಿ ಮೇಟಿ, ಹಲವಾರು ವ್ಯಾಪಾರಸ್ಥರು ಪಾಲ್ಗೊಂಡಿದ್ದರು.

Please follow and like us:
error