ಮಾಧ್ಯಮದವರನ್ನು ಹೊರಗಿಟ್ಟು ಕೌರವನ ಕೆಡಿಪಿ ಸಭೆ ಯಾಕೆ ?

ಕೊಪ್ಪಳ : ಪ್ರತಿ ಸಲ ಕೆಡಿಪಿ ಸಭೆ ನಡೆಯುವಾಗ ಎಲ್ಲ ಮಾಧ್ಯಮದವರಿಗೆ ಸಭೆಯಲ್ಲಿ ಅನುಮತಿ ನೀಡಲಾಗುತ್ತಿತ್ತು. ಇದು ಹತ್ತಾರು ವರ್ಷಗಳಿಂದಲೇ ನಡೆದುಕೊಂಡು ಬಂದಿದೆ. ಸ್ವತಃ ಸಿಎಂ ಕೊಪ್ಪಳದ ಜಿಲ್ಲಾ ಪಂಚಾಯತ್ ನಲ್ಲಿ ಸಭೆ ನಡೆಸಿದಾಗಲೂ ಮಾಧ್ಯಮದವರಿಗೆ ಅವಕಾಶ ನೀಡಲಾಗಿತ್ತು. ಆದರೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಹೊಸ ಹಾದಿ ತುಳಿದಿದ್ದಾರೆ. ಕೆಡಿಪಿ ಸಭೆಗೆ ಪತ್ರಕರ್ತರಿಗೆ ಅವಕಾಶ ನೀಡದೆ ಹೊರಗೆ ಕಳಿಸಿದ್ದಾರೆ. ಸಭೆಯ ಆರಂಭದಲ್ಲಿ ಪೋಟೊ, ವಿಡಿಯೋ ತೆಗೆಯಲು ಅವಕಾಶ ನೀಡಿ ನಂತರ ಹೊರಹೋಗಲು ತಿಳಿಸಿದ್ದಾರೆ. ಇದು ಮಾದ್ಯಮದವರ ಆಕ್ರೋಶಕ್ಕೆ ಕಾರಣವಾಗಿದೆ. ಮುಕ್ತವಾಗಿ ನಡೆಯಬೇಕಾದ ಸಭೆಗಳಿಗೆ ಈ ನಿಯಂತ್ರಣ ಹಾಕುತ್ತಿರುವುದಾದರೂ ಏಕೆ ? ಅಂತಹ ಯಾವ ಗೌಪ್ಯ ವಿಷಯ ಚರ್ಚಿಸಲಾಗುತ್ತಿದೆ ಎನ್ನುವುದು ಪ್ರಶ್ನೆಯಾಗಿದೆ.

Please follow and like us:
error