ಮಾಜಿ ಸಿಎಂ ದಿವಂಗತ ಜೆ.ಎಚ್. ಪಟೇಲ್ ಪತ್ನಿ ಸರ್ವಮಂಗಳಮ್ಮ  (೮೫) ನಿಧನ

ದಾವಣಗೆರೆ : ಮಾಜಿ ಸಿಎಂ ದಿವಂಗತ ಜೆ.ಎಚ್. ಪಟೇಲ್ ಪತ್ನಿ ಸರ್ವಮಂಗಳಮ್ಮ ಪಟೇಲ್ (೮೫) ನಿಧನ.ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸರ್ವಮಂಗಳಮ್ಮ. ಬೆಂಗಳೂರಿನ ಡಾಲರ್ಸ್ ಕಾಲೋನಿಯ ಪುತ್ರ ಮಹಿಮಾ ಪಟೇಲ್ ಮನೆಯಲ್ಲಿ ನಿಧನರಾಗಿದ್ದಾರೆ.

ಮಾಜಿ ಶಾಸಕ ಮಹಿಮಾ ಪಟೇಲ್ ಸೇರಿ ಇಬ್ಬರು ಪುತ್ರರು ಹಾಗೂ ಅಪಾರ ಬಂಧು ಬಳಗವನ್ನ ಅಗಲಿದ ಸರ್ವಮಂಗಳಮ್ಮ ಸ್ವ ಗ್ರಾಮ ಕಾರಿಗನೂರಿಗೆ ಸರ್ವಮಂಗಳಮ್ಮ ಪಾರ್ಥಿವ ಶರೀರ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಕಾರಿಗನೂರು ಗ್ರಾಮ‌. ಮನೆಯ ಮುಂದೆ ಸಾರ್ವಜನಿಕರ ಪಾರ್ಥಿವ ಶರೀರ ದರ್ಶನಕ್ಕೆ ವ್ಯವಸ್ಥೆ.ಮಾಜಿ ಸಿಎಂ ಜೆಎಚ್ ಪಟೇಲ್ ಸಮಾಧಿ ಪಕ್ಕದಲ್ಲಿ ಅಂತ್ಯ ಸಂಸ್ಕಾರ. ಅವರ ಜಮೀನಲ್ಲೆ ಇರುವ ಪಟೇಲ್ ಸಮಾಧಿ.

Please follow and like us:
error