You are here
Home > ಈ ಕ್ಷಣದ ಸುದ್ದಿ > ಮಾಜಿ ಶಾಸಕ ಎಂ.ಪಿ.ರವೀಂದ್ರ ನಿಧನ

ಮಾಜಿ ಶಾಸಕ ಎಂ.ಪಿ.ರವೀಂದ್ರ ನಿಧನ

ರಾಜ್ಯದ ಮಾಜಿ ಉಪಮುಖ್ಯಮಂತ್ರಿ ದಿ.ಎಂ.ಪಿ.ಪ್ರಕಾಶ್ ರವರ ಪುತ್ರರಾದ, ಹರಪನಹಳ್ಳಿ ಮಾಜಿ ಶಾಸಕರಾದ ಎಂ.ಪಿ.ರವೀಂದ್ರ ರವರು ಇಂದು ಬೆಳಗ್ಗೆ 3.45 ಗಂಟೆಗೆ ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ .
ರಾಜ್ಯ ರಾಜಕಾರಣ ಮತ್ತು ಸಹಕಾರಿ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಎಂ.ಪಿ.ರವೀಂದ್ರರವರು, ಅಪಾರ ಬಂಧುಬಳಗ ಮತ್ತು ಅಭಿಮಾನಿ ವರ್ಗವನ್ನು ಅಗಲಿದ್ದಾರೆ.

ಬೆಂಗಳೂರಿನ ಗಾಂಧಿಭವನ ಹತ್ತಿರದ ವಲ್ಲಭ ನಿಕೇತನದಲ್ಲಿ 3/11/2018 ರ ಬೆಳಗ್ಗೆ 9.00 ಗಂಟೆಯಿಂದ ಬೆಳಗ್ಗೆ 10.30 ರವರೆಗೆ ಸಾರ್ವಜನಿಕ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿರುತ್ತದೆ.

ನಂತರ ರಸ್ತೆ ಮುಖಾಂತರ ಹರಪನಹಳ್ಳಿಗೆ ತೆರಳಿ ಮಧ್ಯಾಹ್ನ 3.00 ಗಂಟೆಯಿಂದ 6.00 ಗಂಟೆಯವರೆಗೆ ಸ್ಥಳೀಯ ಎ.ಡಿ.ಬಿ ಕಾಲೇಜು ಮೈದಾನದಲ್ಲಿ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿರುತ್ತದೆ.

ನಂತರ ಸ್ವಗ್ರಾಮ ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿಗೆ ತೆರಳಿ ದಿನಾಂಕ 4/11/2018 ರ ಬೆಳಗ್ಗೆ 11.00 ಗಂಟೆಯವರೆಗೆ ಜಿ.ಬಿ.ಆರ್. ಕಾಲೇಜು ಆವರಣದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಲಾಗಿದ್ದು, ನಂತರ ಅಪರಾಹ್ನ 12.00 ಗಂಟೆಗೆ ದಿ.ಎಂ.ಪಿ.ಪ್ರಕಾಶ್ ರವರ ಸಮಾಧಿ ಹತ್ತಿರ ಅಂತಿಮ ವಿಧಿವಿಧಾನಗಳ ಮೂಲಕ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಶ್ರೀಮತಿ ರುದ್ರಾಂಬ ಎಂ.ಪಿ.ಪ್ರಕಾಶ್ ಮತ್ತು ಕುಟುಂಬ ವರ್ಗ. ಹೂವಿನಹಡಗಲಿ ತಿಳಿಸಿದ್ದಾರೆ

Top