ಮಹಿಳಾ ಪಿಸಿ ಆಸ್ಪತ್ರೆಯಿಂದ ಬಿಡುಗಡೆ : ಮನೆ ಮಾಲಿಕರ ಕಿರಿಕಿರಿಗೆ ಕಂಗಾಲು

ಕೊಪ್ಪಳ : ಇತ್ತೀಚಿಗೆ ಕರೋನಾ ಪಾಜಿಟಿವ್ ಬಂದಿದ್ದ ನಗರ ಠಾಣೆಯ ಮಹಿಳಾ ಪೋಲಿಸ್ ಇಂದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ನಗರ ಠಾಣೆಯ ಪೇದೆಯೊಬ್ಬರಿಗೆ ಪಾಜಿಟಿವ್ ಬಂದಿದ್ದರಿಂದ ಟನಕನಕಲ್ ನ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಅವರಿಗೆ ಕ್ವಾರಂಟೈನ್ ಮಾಡಲಾಗಿತ್ತು. ಅವರಲ್ಲಿ ಮಹಿಳಾ ಪೇದೆಗೆ ಪಾಜಿಟಿವ್ ಬಂದಿತ್ತು. ಅವರನ್ನು ಕೊವಿಡ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಯಿಂದ ಗುಣಮುಖರಾದ ಹಿನ್ನೆಲೆ ಇಂದು ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಮಹಿಳಾ ಠಾಣೆಯ ಪಿಐ ಪ್ರಕಾಶ್ ಮಾಳಿ ಮತ್ತಿತರರು ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಸಮಸ್ಯೆ ಆರಂಭವಾಗಿದ್ದೆ ಇಲ್ಲಿಂದ ಆಸ್ಪತ್ರೆಯಿಂದ ಮನೆಗೆ ತೆರಳಿದ ಮಹಿಳಾ ಪೇದೆಯನ್ನಹ ಮನೆಯ ಮಾಲಿಕರು ಒಳಗೆ ಸೇರಿಸಿಕೊಳ್ಳಲು ತಯಾರಿರಲಿಲ್ಲ. ನಿಮಗೆ ಕರೋನಾ ಬಂದಿದೆ.ಮನೆಗೆ ಬರಬೇಡಿ ಅಂತಾ ತಕರಾರು ತೆಗೆದಿದ್ದಾರೆ. ಆಸ್ಪತ್ರೆಯಿಂದ ಮನೆಗೆ ಬಂದ ಸಂಭ್ರಮದಲ್ಲಿದ್ದ ಮಹಿಳಾ ಪೇದೆಗೆ ಇದರಿಂದ ನಿರಾಸೆ ಮತ್ತು ಬಹಳ ಬೇಸರವಾಗಿ ಏನು ಮಾಡಲೂ ದಿಕ್ಕುತೋಚದಂತಾಗಿದೆ. ಕೊನೆಗೆ ಪ್ರಕಾಶ ಮಾಳಿಯವರು ಮನೆಗೆ ತೆರಳಿ ಮನೆಯ ಮಾಲಿಕರಿಗೆ ತಿಳಿಹೇಳಿದ್ದಾರೆ. ಮನೆಗೆ ಸೇರಿಸಿಕೊಳ್ಳದಿದ್ದರೆ ಕಾನೂನು ಕ್ರಮ ಎದುರಿಸಬೇಕಾಗುತ್ತೆ ಅಂದಾಗ ಮನೆಯ ಮಾಲಿಕರು ಒಪ್ಪುಕೊಂಡಿದ್ದಾರೆ. ಇಡೀ ಜನಜೀವನ ಕಾಯುವ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಕೆಲಸ ಮಾಡುತ್ತಿರುವ ಕರೋನಾ ವಾರಿಯರ್ಸ್ ಗಳಿಗೆ ಈರೀತಿಯಾದರೆ ಜನಸಾಮಾನ್ಯರ ಪಾಡೇನು ಎಂದು ತೀವ್ರ ನಿರಾಸೆಯನ್ನು ಪೋಲಿಸರು ವ್ಯಕ್ತಪಡಿಸಿದ್ದಾರೆ.

Please follow and like us:
error