ಮಹದೇವ ಪ್ರಕಾಶ, ಜಯತೀರ್ಥ ಕಾಗಲಕರ ನಿಧನ ಕೆಯುಡಬ್ಲ್ಯೂಜೆ ಸಂತಾಪ

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಿಕಟ ಪೂರ್ವ ಮಾಧ್ಯಮ ಸಲಹೆಗಾರ, ಈ ಭಾನುವಾರ ಪತ್ರಿಕೆ ಸಂಪಾದಕರು, ಎಲ್ಲಾ ಕಾಲಘಟ್ಟದಿಂದ ಹಿಡಿದು ಇಂದಿನ ಬೆಳವಣಿಗೆ ತನಕ ರಾಜಕೀಯ ವಿಮರ್ಶೆಗಳನ್ನು ಸಮರ್ಥವಾಗಿ ಮಾಡುವ ಮೂಲಕ ಮನೆ ಮಾತಾಗಿದ್ದ, ಅಪಾರ ಜ್ಞಾನ ಭಂಡಾರ ಹೊಂದಿದ ಹಿರಿಯ ಪತ್ರಕರ್ತ ಮಹದೇವ ಪ್ರಕಾಶ್ ಅವರು ಕೋವಿಡ್ ಗೆ ಬಲಿಯಾಗಿದ್ದು ಅತ್ಯಂತ ನೋವಿನ ಸಂಗತಿ.

ಕಲಬುರ್ಗಿ ಸಂಯುಕ್ತ ಕರ್ನಾಟಕ ಬ್ಯೂರೋ ಮುಖ್ಯಸ್ಥರಾಗಿದ್ದ ಕ್ರೀಯಾಶೀಲ
ಪತ್ರಕರ್ತ ಜಯತೀರ್ಥ ಕಾಗಲಕರ ಅವರ ಸಾವು ಕೂಡ ನೋವಿನ ಸಂಗತಿ.

ಮಹದೇವ ಪ್ರಕಾಶ್ ಮತ್ತು ಜಯತೀರ್ಥ ಕಾಗಲಕರ ಅವರ
ಸಾವಿಗೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಮಹದೇವ ಪ್ರಕಾಶ್ ಮತ್ತು ಜಯತೀರ್ಥ ಕಾಗಲಕರ ಅವರುಗಳ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ದುಃಖ ತಡೆಯುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಕೆಯುಡಬ್ಲ್ಯೂಜೆ ಅಧ್ಯಕ್ಷರು ಪ್ರಾರ್ಥಿಸಿದ್ದಾರೆ.

Please follow and like us:
error