ಮಹದಾಯಿಗಾಗಿ ರೈತರ ಪ್ರತಿಭಟನೆ- ಕಾರು ಬಿಟ್ಟು ನಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ

ಮಹದಾಯಿ ಕಾನೂನು ಹೋರಾಟದಲ್ಲಿ ರಾಜ್ಯಕ್ಕೆ ಸೋಲಾಗಿದೆ. ಇತ್ತ ನಮ್ಮ ರೈತ ಹೋರಾಟಗಾರರ ಮೇಲೆ ಬಾಸುಂಡೆ ಬರುವಂತೆ ಹೊಡೆದು ಜೈಲಿಗಟ್ಟಲಾಗಿದೆ ಎಂದು ನರಗುಂದ – ನವಲಗುಂದ ಮೊದಲಾದ ಕಡೆಗಳಿಂದ ಬಂದಿದ್ದ ರೈತರ ಮನೆಗಳ ಹೆಣ್ಮಕ್ಕಳು ಅಳುತ್ತಿದ್ದರೆ, ಕಾರ್‌ನಲ್ಲಿ ಸರ್ವಪಕ್ಷ ಸಭೆಗೆ ತೆರಳುತ್ತಿದ್ದ ಮುಖ್ಯಮಂತ್ರಿಗೆ ಇವರ ಅಳು ಕೇಳಿಸಿತೋ ಎಂಬಂತೆ  ವಿಧಾನಸೌಧದ ಕೆಂಗಲ್ ಪ್ರತಿಮೆ ಇರುವ ಗೇಟ್ ಬಳಿಯಲ್ಲೇ ಕಾರ್‌ನಿಂದ ಇಳಿದರು.ನೇರವಾಗಿ ಪ್ರತಿಭಟನಾಕಾರರ ಬಳಿ ತೆರಳಿ ಅಹವಾಲು ಆಲಿಸಿದರು. ಪ್ರತಿಭಟನೆಯ ನೇತೃತ್ವ ವಹಿಸಿದ್ದ ಧಾರವಾಡದ ಹೈಕೋರ್ಟ್ ಪೀಠದ ವಕೀಲರ ಸಂಘದ ಮಾಜಿ ಅಧ್ಯಕ್ಷ ಹಿರಿಯ ವಕೀಲ ಬಿ.ಡಿ. ಹಿರೇಮsiddaramaiah12ಠ್ ಮೊದಲಾದವರು ಮುಖ್ಯಮಂತ್ರಿಗೆ ಪೊಲೀಸ್ ದೌರ್ಜನ್ಯದ ಕುರಿತು ವಿವರಿಸಿದರು. ಕನ್ನಡ ಚಳವಳಿ ನಾಯಕ ವಾಟಾಳ್ ನಾಗರಾಜ್, ಸಾ.ರಾ. ಗೋವಿಂದ್ ಮೊದಲಾದವರೂ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿ ಅಮಾಯಕರ ಮೇಲೆ ದೌರ್ಜನ್ಯ ನಡೆಸಿದ ಪೊಲೀಸರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು. ಬಳಿಕ ಮುಖ್ಯಮಂತ್ರಿ ನಡೆದುಕೊಂಡೇ ವಿಧಾನಸೌಧಕ್ಕೆ ಬಂದು ಮೂರನೇ ಮಹಡಿಯ ಸಮ್ಮೇಳನ ಸಭಾಂಗಣಕ್ಕೆ ಬಂದರು.

Related posts

Leave a Comment