ಮಲ್ಲಮ್ಮನ ಆದರ್ಶ ಸಮಾಜಕ್ಕೆ ಮಾದರಿ

ಕೊಪ್ಪಳ :ಕಾಯಕ ನಿಷ್ಠೆ, ದಾನವನ್ನು ಮೈಗೂಡಿಸಿಕೊಂಡಿದ್ದ ಶ್ರೀ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಅವರ ಆದರ್ಶಗಳು ರಡ್ಡಿ ಸಮಾಜಕ್ಕೆ ಆಲದ ಮರವಿದ್ದಂತೆ ಎಂದು ಇತಿಹಾಸ ಉಪನ್ಯಾಸಕ ಶಂಕರ ಮಾಳೆಕೊಪ್ಪ ಹೇಳಿದರು.
ನಗರದ ಕಿನ್ನಾಳ ರಸ್ತೆಯಲ್ಲಿರುವ ಶ್ರೀ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ
ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಕಾಯಕ ನಿಷ್ಠೆ, ಆದರ್ಶ ಜೀವನ, ಜೀವನದಲ್ಲಿ ಸಮಾ`ನ ಹೊಂದಿ ವೈರಾಗ್ಯ ಮೂರ್ತಿಗಳಾಗಬೇಕು. ಸಂಸ್ಕಾರದಿಂದ ಸದ್ಗತಿ ದೊರೆಯುತ್ತದೆ. ಪತಿವೃತ `ರ್ಮ ಪಾಲಿಸಬೇಕು ಎಂಬುದನ್ನು ಮಲ್ಲಮ್ಮನವರು ನಿರೂಪಿಸಿzರೆ. ಮಲ್ಲಮ್ಮನ ಆದರ್ಶವನ್ನು ರಡ್ಡಿ ಸಮಾಜ ಬೆಳೆಸಿಕೊಂಡಿದ್ದು, ಅದರಲ್ಲೂ ಇಲ್ಲಿಯ ರಡ್ಡಿ `ಂದವರ ಒಗ್ಗಟ್ಟು ನಿಜಕ್ಕೂ ಸಂತಸದ ಸಂಗತಿ.
ಮಲ್ಲಮ್ಮನವರು ನಾಗರಡ್ಡಿ ಮಗಳಾಗಿ, ಸಿzಪೂರದ ರಾಜಕುಮಾರ `ರಮರೆಡ್ಡಿಗೆ ಸತಿಯಾಗಿದ್ದಳು. ಎಸ್. ಸೌಂದರ್ಯರಾಜ್ ಅವರು ಗುಬ್ಬಿ ವೀರಣ್ಣ ನಿರ್ದೆಶನದಲ್ಲಿ ಮಲ್ಲಮ್ಮನ ಚಲನಚಿತ್ರ ತೆಗೆದಿದ್ದಾರೆ. ಅವರ ಸಂಪೂರ್ಣ ಜೀವನಗಾಥೆ ಆ ಚಿತ್ರದಲ್ಲಿದೆ. ಪ್ರಮುಖವಾಗಿ ಮಲ್ಲಮ್ಮ ಯಾವುದೇ ವಚನ ಬರೆದಿಲ್ಲ. `ಜನೆ ಪದ ಹಾಡಿಲ್ಲ. ತನ್ನ ಬದುಕನ್ನೆ ವಚನವನ್ನಾಗಿಸಿ, ಆದರ್ಶವನ್ನೆ `ಜನೆ ಪದವನ್ನಾಗಿಸಿ ಎಲ್ಲರಿಗೂ ಮಾರ್ಗದರ್ಶಿಯಾಗಿzರೆ ಎಂದರು.
ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಸಿ.ವಿ.ಚಂದ್ರಶೇಖರ್ ಮಾತನಾಡಿ, ವಿದ್ಯಾರ್ಥಿಗಳಿಗೆ ಶಿPಣ ಕೊಡಿಸುವುದು ಬಹಳ ಮುಖ್ಯ. ಅದರಂತೆ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಕಾರ್ಯಕ್ರಮದಲ್ಲಿ ಸನ್ಮಾನಿಸಿರುವುದು ಸಂತಸದ ಸಂಗತಿ. ಮಲ್ಲಮ್ಮನ ಜೀವನ ಆದರ್ಶ ಯುವಜನತೆಗೆ ದಾರಿ ದೀಪ.
ಮಲ್ಲಮ್ಮ ಚಿಕ್ಕವಳಾಗಿzಗ ತಾಯಿಯನ್ನು ಕಳೆದುಕೊಂಡಳು. ಮದುವೆಯಾದಾಗ ಅತ್ತೆ, ನಾದ್ನಿಯ ಕಾಟ.
ಹೀಗೆ ಲೌಕಿಕ ಜೀವನಕ್ಕೆ ಮುಕ್ತಿ ಹೊಂದಿ ಆ`ತ್ಮದತ್ತ ಹೊರಳಿದಳು. ಅವರ ಆದರ್ಶವನ್ನು ಪ್ರತಿಯೊಬ್ಬರು ಜೀವನದಲ್ಲಿ ಅಲವಡಿಸಿಕೊಂಡು ಜೀವನದಲ್ಲಿ ಮುನ್ನಲೆ ಸಾಧಿಸೋಣ ಎಂದರು.
ಮುಖಂಡ ಕೃಷ್ಣರಡ್ಡಿ ಗಲಿಬಿ ಪ್ರಾಸ್ಥವಿಕವಾಗಿ ಮಾತನಾಡಿದರು. ಜಿಪಂ ಮಾಜಿ ಅಧ್ಯಕ್ಷ ಎಸ್.ಬಿ.ನಾಗರಳ್ಳಿ, ಮುಖಂಡರಾದ ಸುರೇಶ ಭೂಮರಡ್ಡಿ, ವೆಂಕನಗೌಡ ಹಿರೇಗೌಡ್ರ, ಪ್ರಭು ಹೆಬ್ಬಾಳ, ವಕೀಲರಾದ ವೆಂಕರಡ್ಡಿ, ಗುತ್ತಿಗೆದಾರ ಬಸವರಾಜ ಪುರದ, ಎಪಿಎಂಸಿ ಮಾಜಿ ಅ`P ಹನುಮರಡ್ಡಿ ಹಂಗನಕಟ್ಟಿ, ಹೇಮರಡ್ಡಿ ಬಿಸರಳ್ಳಿ, ಜೆಡಿಎಸ್ ರಾಜ್ಯ ಉಪಾ`ಕ್ಷ ಪ್ರದೀಪಗೌಡ ಮಾಲಿಪಾಟೀಲ್, ಸಂಗಪ್ಪ ವಕ್ಕಳದ, ಕೇಶವರಡ್ಡಿ ಮಾದಿನೂರು ಸೇರಿದಂತೆ ಇತರರು ಇದ್ದರು.
ಇದೇ ವೇಳೆ ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಶೇ. ೯೦ಕ್ಕಿಂತ ಹೆಚ್ಚು ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳನ್ನು ಇದೇ ವೇಳೆ ಸನ್ಮಾನಿಸಿ, ಗೌರವಿಸಲಾಯಿತು.

Please follow and like us:
error