fbpx

ಮರಾಠ ಸಮುದಾಯದ ಅಭಿವೃದ್ಧಿ ಪ್ರಾಧಿಕಾರದ ಸ್ಥಾಪನೆಗೆ ಕರವೇ ತೀವ್ರ ಖಂಡನೆ

ಗಂಗಾವತಿ : ರಾಜ್ಯ ಸರ್ಕಾರವು ಮರಾಠ ಸಮುದಾಯದ ಅಭಿವೃದ್ಧಿಗಾಗಿ ಪ್ರಾಧಿಕಾರ ಸ್ಥಾಪನೆಗೆ ಅಸ್ತು ಎಂದಿರುವುದು ತೀವ್ರ ಖಂಡನೀಯವಾಗಿದೆ ಎಂದು ಕರವೇ ಕೊಪ್ಪಳ ಜಿಲ್ಲಾಧ್ಯಕ್ಷರಾದ ಪಂಪಣ್ಣ ನಾಯಕ ಪ್ರಕಟಣೆಯಲ್ಲಿ ಕಿಡಿ ಕಾರಿದ್ದಾರೆ . ಅವರು ಪ್ರಕಟಣೆಯ ನೀಡುವ ಸಂದರ್ಭದಲ್ಲಿ ಮಾತನಾಡಿ , ಮರಾಠರು ಕರ್ನಾಟಕದ ನಾಡು – ನುಡಿ , ನೆಲ – ಜಲ , ಭಾಷೆಯ ವಿಷಯದಲ್ಲಿ ಕನ್ನಡಿಗರ ವಿರುದ್ಧ ಧ್ವನಿ ಎತ್ತುವ ಮೂಲಕ ಗಡಿ ನಾಡು ಬೆಳಗಾವಿಯಲ್ಲಿ ಮಹಾರಾಷ್ಟ್ರದ ಜೊತೆಗೆ ಕೈಜೋಡಿಸುವ ಮೂಲಕ ಕನ್ನಡ ನಾಡಿಗೆ ತೀವ್ರವಾಗಿ ಅವಮಾನವೆಸಗಿರುತ್ತಾರೆ . ಇಂತಹ ಸಮಾಜದ ಅಭಿವೃದ್ಧಿಗಾಗಿ ನಮ್ಮ ರಾಜ್ಯ ಸರ್ಕಾರ ೫೦ ಕೋಟಿ ರೂಪಾಯಿಗಳ ಅನುದಾನವನ್ನು ಮೀಸಲಿಟ್ಟು ಮರಾಠ ಸಮುದಾಯ ಅಭಿವೃದ್ಧಿ ಪ್ರಾಧಿಕಾರಕ್ಕೆ ಅಸ್ತು ಎಂದಿರುವುದು ತೀವ್ರ ವಿಷಾದನೀಯವಾಗಿದೆ . ಮಹಾರಾಷ್ಟ್ರ ಏಕೀಕರಣ ಸಮಿತಿ ಹಾಗೂ ಶಿವಸೇನೆ ಸಂಘಟನೆಗಳು ಹುಟ್ಟಿಕೊಂಡಿರುವುದೇ ಕನ್ನಡಿಗರ ವಿರುದ್ಧ ಧ್ವನಿ ಎತ್ತಲು , ರಾಜ್ಯದ ಗಡಿ ವಿಷಯದಲ್ಲಿ ಮಹಾರಾಷ್ಟ್ರವು ಬೆಳಗಾವಿಯನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದು , ಇಲ್ಲಿಯವರೆಗೆ ಹಿಂದಿನ ಸರ್ಕಾರಗಳು ವೊಟ್ ಬ್ಯಾಂಕ್ ರಾಜಕಾರಣ ಮಾಡುವ ಮೂಲಕ ಮೂಲೆಗುಂಪಾಗಿವೆ . ತಮ್ಮ ಸರ್ಕಾರವು ಕೂಡ ಇದೇ ದಾರಿ ಹಿಡಿದಿರುವುದು ತುಂಬಾ ನೋವಿನ ಸಂಗತಿಯಾಗಿದೆ . ಪ್ರತಿ ಬಾರಿ ನಮ್ಮ ಕನ್ನಡ ರಾಜ್ಯೋತ್ಸವ ದಿನದಂದು ಕಪ್ಪುಬಾವುಟ ತೋರಿಸುವ ಇಂತಹ ಸಂಘಟನೆಗಳು ಹಾಗೂ ಸಮುದಾಯಕ್ಕೆ ನಮ್ಮ ರಾಜ್ಯದ ಅನುದಾನದ ಅವಶ್ಯಕತೆ ಇದೆಯೇ ? ಕನ್ನಡಿಗರಿಗೆ ಅವಮಾನ , ದಬ್ಬಾಳಿಕೆ , ದೌರ್ಜನ್ಯ ಎಲ್ಲವನ್ನು ಮರೆತು ಮರಾಠ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸುತ್ತಿರುವುದನ್ನು ಕೂಡಲೇ ರಾಜ್ಯ ಸರ್ಕಾರ ಇದೇ ನವೆಂಬರ್ -೨೭ ರೊಳಗೆ ಕೈಬಿಡಬೇಕು . ಇಲ್ಲವಾದಲ್ಲಿ ನಮ್ಮ ಕರವೇ ಸಂಘಟನೆಯು ರಾಜ್ಯಾಧ್ಯಂತ ಮುಂದಿನ ದಿನಗಳಲ್ಲಿ ಉಗ್ರವಾದ ಪ್ರತಿಭಟನೆಗಳನ್ನು ಹಮ್ಮಿಕೊಳ್ಳುವುದರ ಜೊತೆಗೆ ಕರ್ನಾಟಕ ಬಂದ್ ಮಾಡಿ ಹೋರಾಟ ಮಾಡಲಾಗುವುದು ಎಂದು ರಾಜ್ಯ ಸರ್ಕಾರಕ್ಕೆ ಕೊಪ್ಪಳ ಜಿಲ್ಲಾಧ್ಯಕ್ಷ. ಕರವೇ ಪಂಪಣ್ಣ ನಾಯಕ ( ಪ್ರವೀಣಕುಮಾರ ಶೆಟ್ಟಿ ಬಣ ) ಎಚ್ಚರಿಕೆ ನೀಡಿದ್ದಾರೆ

Please follow and like us:
error
error: Content is protected !!