ಮನ್ವಂತರ ಕಾರ್ಯಕ್ರಮ ಬಹುಮಾನ ವಿಜೇತರ ಹೆಸರು ಘೋಷಣೆ

ಕನ್ನಡನೆಟ್ : ಜಿಲ್ಲೆಯಲ್ಲಿ ಪುಸ್ತಕ ಓದುವ ಹವ್ಯಾಸವನ್ನು ಹೆಚ್ಚಿಸುವಂತೆ ಮಾಡಲು “ ಮನ್ವಂತರ ” ಕಾರ್ಯಕ್ರಮವನ್ನು ಜಿಲ್ಲಾಡಳಿತ 03.08.2020 ರಂದು ಚಾಲನೆ ನೀಡಿತ್ತು . ಮಕ್ಕಳ ಮತ್ತು ವಯಸ್ಕರ ವಿಭಾಗದಲ್ಲಿ ಹೆಸರಾಂತ ವ್ಯಕ್ತಿಗಳು ರಚಿಸಿರುವ 10 ಪುಸ್ತಕಗಳನ್ನು ಆಯ್ಕೆ ಮಾಡಿ ಅವುಗಳನ್ನು ಓದಿ ವಿಮರ್ಶೆ ಬರೆದು ಸಲ್ಲಿಸುವಂತೆ ತಿಳಿಸಲಾಗಿತ್ತು . ಕಾರ್ಯಕ್ರಮಕ್ಕೆ ಜಿಲ್ಲೆಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು ಒಟ್ಟು 5421 ಮಂದಿ ತಮ್ಮ ಹೆಸರನ್ನು ಕಾರ್ಯಕ್ರಮಕ್ಕೆ ನೋಂದಣಿ ಮಾಡಿದರು . ಇವರಲ್ಲಿ 2175 ಜನರು ಪುಸ್ತಕವನ್ನು ಓದಿ ವಿಮರ್ಶೆಯನ್ನು ಸಲ್ಲಿಸಿರುತ್ತಾರೆ . ಕಾರವಾದ ಎಲ್ಲಾ ವಿಮರ್ಶೆಗಳನ್ನು ತಾಲ್ಲೂಕವಾರು ಮತ್ತು ಪುಸ್ತಕವಾರು ವಿಂಗಡಿಸಿ ತಾಲ್ಲೂಕ ಮಟ್ಟದ ಮೌಲ್ಯಮಾಪನ ಸಮಿತಿಯನ್ನು ರಚಿಸಿ ಮೌಲ್ಯಮಾಪನ ನಡೆಸಲಾಯಿತು . ಪ್ರತೀ ಪುಸ್ತಕಕ್ಕೆ 2 ರಂತೆ ಪ್ರತಿ ಶೈಕ್ಷಣಿಕ ತಾಲ್ಲೂಕ ಮಟ್ಟದಿಂದ 20 ವಿಮರ್ಶೆಗಳನ್ನು ಆಯ್ಕೆ ಮಾಡಲಾಯಿತು . ಹೀಗೆ ಸ್ವೀಕಾರವಾದ 65 ವಿಮರ್ಶೆಗಳನ್ನು ಜಿಲ್ಲಾ ಮಟ್ಟದ ಮೌಲ್ಯ ಮಾಪನ ತಂಡದಿಂದ ಮೌಲ್ಯ ಮಾಪನ ನಡೆಸಿ ಈ ಕೆಳಗಿನ 20 ಜನರನ್ನು ಆಯ್ಕೆ ಮಾಡಿ , ದಿನಾಂಕ 15.09.2020 ರಂದು ಈ ಕಛೇರಿಯ ಸಭಾಂಗಣದಲ್ಲಿ ಸಂದರ್ಶನ ನಡೆಸಿದ್ದು , ಈ ಕೆಳಗಿನ ಅಭ್ಯರ್ಥಿಗಳು ಆಯ್ಕೆಯಾಗಿರುತ್ತಾರೆ . ಮಕ್ಕಳ ವಿಭಾಗ ಕ್ರಸಂ ಪುಸ್ತಕದ ಹೆಸರು ವಿದ್ಯಾರ್ಥಿಯ ಹೆಸರು ಮೆಲುವ ಸಾಕ್ಷೀ ಪಾಟೀಲ್ ಪ್ರಥಮ ಚೋಮನದುಡಿ ಬಸವರಾಜ ಅರಕೇರಿ ದ್ವಿತೀಯ ಮಹಾಶ್ವೇತ ಶಾಂತಾ ದೇವಪ್ಪ ತೃತೀಯ ಮಡಿವಾಳರ್ . ಬಹುಮಾನ 1 2 3 ಕ್ರಸಂ ಪುಸ್ತಕದ ಹೆಸರು 1 ವಂಶವೃಕ್ಷ 2 3 ಈ ಡಾಗ್ ವಯಸ್ಕರ ವಿಭಾಗ ವಿದ್ಯಾರ್ಥಿಯ ಹೆಸರು ಬಹುಮಾನ ಸ್ಮಿತಾ ಎಸ್ ಅಂಗಡಿ ಪ್ರಥಮ , ಸುರೇಶ ಪಿ ಪೂಜಾರ ದ್ವಿತೀಯ ವೀರೇಶ ಮೇಟಿ ತೃತೀಯ ಬೆಟ್ಟದ ಜೀವ ಸದರಿರವರಿಗೆ ದಿನಾಂಕ : 17 / 09 / 2020 ರಂದು ಜರುಗಲಿರುವ , “ ಕಲ್ಯಾಣ ಕರ್ನಾಟಕ ಉತ್ಸವ ” ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಎಸ್. ವಿಕಾಸ್ ಕಿಶೋರ್ ಹೇಳಿದ್ದಾರೆ.

Please follow and like us:
error