ಮನೆ ಮನೆಗೆ ದಿನಪತ್ರಿಕೆ ಹಾಕಿ – ಪಿಯುಸಿ ಯಲ್ಲಿ ಶೇ. 91 ರಷ್ಟು ಅಂಕ.

ಇಂತವರಿಗೆಲ್ಲಾ ಹೆಚ್ಚಿನ ಪ್ರಚಾರ ಸಿಗುವುದಿಲ್ಲ.. ದಿನಪತ್ರಿಕೆ ಹಾಕುವ ಬಾಲಕನಿಗೆ ಶೇ. 91 ಅಂಕ. ಪ್ರತಿ ದಿನ ಮನೆ ಮನೆಗೆ ದಿನಪತ್ರಿಕೆ ಹಾಕಿ ಅಭ್ಯಾಸ ಮಾಡಿ 2015-16 ಸಾಲಿನ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಶೇ. 91 ರಷ್ಟು ಅಂಕ ಗಳಿಸಿ ಇತರರಿಗೆ ಮಾದರಿಯಾಗಿದ್ದಾನೆ. ಆನೇಕಲ್‌ನ ಸಂತ ಜೋಸೇಫ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ವಿಷ್ಣು ಕಡು ಬಡತನದಲ್ಲೂ ಶ್ರಮಪಟ್ಟು ಸಾಧನೆ ಶಿಖರ ಏರಿದ್ದಾನೆ. ವಿಷ್ಣುವಿಗೆ ತಂದೆ ಇಲ್ಲ, ತಾಯಿ ಗಾರ್ಮೆಂಟ್‌ಸ್‌ ಕೆಲಸ ಮಾಡುತ್ತಾರೆ. ತಾಯಿಗೆ ಆಸರೆಯಾಗಬೇಕೆನ್ನುವ ಕಾರಣದಿಂದ, ಪ್ರತಿದಿನ ದಿನಪತ್ರಿಕೆ ಹಾಕುತ್ತಾನೆ. ಅದರಿಂದ ಬರುವ ಹಣದಿಂದ ವಿದ್ಯಾಭ್ಯಾಸಕ್ಕೆ ಬಳಸಿಕೊಂಡಿದ್ದಾನೆ.28-ANEKAL-NEWS-AND-PHOTOS-VISHNU-S-91-5-e1464448728329

Leave a Reply