Koppal ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಬೆಂಗಳೂರು ಕೊಪ್ಪಳ ಜಿಲ್ಲಾಘಟಕದ ನೇತೃತ್ವದಲ್ಲಿ ಉತ್ತರ ಪ್ರದೇಶದಲ್ಲಿ ನಡೆದ ವಾಲ್ಮೀಕಿ ಸಮುದಾಯದ ” ಮನಿಷಾ ವಾಲ್ಮೀಕಿ ” ಯುವತಿಯ ಮೇಲೆ ಅತ್ಯಾಚಾರ ಮಾಡಿದ ದುಷ್ಪರಿಗೆ ಗಲ್ಲು ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.
ನಗರದ ಅಶೋಕ ಸರ್ಕಲ್ ನಲ್ಲಿ ನಡೆದ ಪ್ರತಿಭಟನೆ ನಡೆಸಲಾಯಿತು.
ಉತ್ತರ ಪ್ರದೇಶದಲ್ಲಿ ಎರಡು ದಿನಗಳ ಹಿಂದೆ ವಾಲ್ಮೀಕಿ ಸಮುದಾಯದ ” ಮನಿಷಾ ವಾಲ್ಮೀಕಿ ಮಹಿಳೆ ಮೇಲೆ ನಾಲ್ಕು ಜನ ದುಷ್ಕರ್ಮಿಗಳು ಅತ್ಯಾಚಾರ ನಡೆಸಿದ್ದಲ್ಲದೆ ನಾಲಿಗೆ ಕತ್ತರಿಸಿ ಹಾಕಿ , ಕೊಲೆ ಮಾಡಿ , ಪೋಲೀಸ ಅಧಿಕಾರಿಗಳ ಸಹಾಯದೊಂದಿಗೆ ರಾತ್ರೋ ರಾತ್ರಿ ಸುಟ್ಟು ಹಾಕಿದ್ದಾರೆ . ಇದನ್ನು ಖಂಡಿಸಿ ಇವತ್ತಿನ ದಿನ ಅತ್ಯಾಚಾರ ಮಾಡಿದ ದುಷ್ಟರನ್ನು ಗಲ್ಲಿಗೇರಿಸಬೇಕೆಂದು ಹಾಗೂ ಸಹಕಾರ ನೀಡಿದ ಪೋಲಿಸ್ ಅಧಿಕಾರಿಗಳನ್ನು ಕರ್ತವ್ಯದಿಂದ ತೆಗೆದುಹಾಕಬೇಕೆಂದು ಉತ್ತರ ಪ್ರದೇಶದ ಮುಖ್ಯಮಂತ್ರಿಗಳಿಗೆ ಆಗ್ರಹಿಸಿದರು.
ನಮ್ಮ ಭಾರತ ದೇಶದಲ್ಲಿ ಇದುವರೆಗೂ ಮಹಿಳೆಯರು ಸ್ವಾವಲಂಬಿಯಾಗಿ ಬದುಕಲು ಆಗುತ್ತಿಲ್ಲ ಕಾನೂನು ಎಷ್ಟೇ ಕಠಿಣ ಶಿಕ್ಷೆ ಮಾಡಿದರೂ ಮಹಿಳೆಯರ ಮೇಲೆ ಅತ್ಯಾಚಾರ , ದೌರ್ಜನ್ಯ ನಿಲ್ಲುತ್ತಿಲ್ಲಾ ಇನ್ನು ಮೇಲಾದರೂ ಕಠಿಣ ಕಾನೂನನ್ನು ಜಾರಿಗೆ ಮಾಡಿ , ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು . ಶರಣಪ್ಪ ಎಚ್ . ನಾಯಕ ತಾಲೂಕ ಅಧ್ಯಕ್ಷ, ಸುರೇಶ ಡೊಣ್ಣಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಶಿವಮೂರ್ತಿ ಗುತ್ತೂರ, ಹನುಮಂತಸಾ, ಪರಸಪ್ಪ, ದೇವಪ್ಪಾ, ರಂಗಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.
