ಮನಸೂರೆಗೊಂಡ ಸ್ವರ ಸಂಗೀತ ಮಹೋತ್ಸವ

Kannada
ಭಾಗ್ಯನಗರದ ಸ್ವರ ಸೌರಭ ಆಡಿಟೋರಿಯಂ ಹಾಲ್‌ನಲ್ಲಿ ಸ್ವರ ಸೌರಭ ಸಂಗೀತ ಮತ್ತು ಲಲಿತಕಲಾ ಸಂಸ್ಥೆಯ ವತಿಯಿಂದ ನಿನ್ನೆ ಆಯೋಜಿಸಿದ್ದ ಸ್ವರ ಸಂಗೀತ ಮಹೋತ್ಸವ ಕಾರ್ಯಕ್ರಮವು ಜನರ ಮನಸೂರೆಗೊಂಡಿತು. ವಿವಿಧ ಕಾರ್ಯಕ್ರಮಗಳು ಅನೇಕ ಕಲಾವಿದರಿಂದ ಅಚ್ಚುಕಟ್ಟಾಗಿ ಮೂಡಿ ಬಂದವು. ಕಾರ್ಯಕ್ರಮದ ಉದ್ಘಾಟಕರಾಗಿ ಶಿಕ್ಷಕರಾದ ತೋಟಪ್ಪ ಬೆಲ್ಲದರವರು ವಹಿಸಿ ಅಧ್ಯಕ್ಷರಾಗಿ ವೀರಪ್ಪ ಶ್ಯಾವಿ ಮುಖ್ಯ ಅತಿಥಿಗಳಾಗಿ ಭಾಷಾ ಹಿರೇಮನಿ, ಮಹಾಂತೇಶ ಹಳ್ಳೂರ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಹೃಷಿಕೇಶ ಮರೇಗೌಡರರಿಂದ ಬಾನ್ಸುರಿ ಮಂಗಲವಾದನ, ರಾಮಚಂದ್ರಪ್ಪ ಉಪ್ಪಾರರಿಂದ ಹಿಂದುಸ್ತಾನಿ ಶಾಸ್ತಿçÃಯ ಸಂಗೀತ, ಭಾಷಾ ಹಿರೇಮನಿಯಿಂದ ಸುಗಮ ಸಂಗೀತ, ವಿಜಯಲಕ್ಷಿö್ಮà ನಾಗರಜರಿಂದ ಭಾವಗೀತೆಗಳು, ಬಿ.ಪಿ ಮರೇಗೌಡರಿಂದ ತತ್ವಪದ, ಸಂಜನ್ ಬೆಲ್ಲದರಿಂದ ವಚನ ಸಂಗೀತ, ಅಲ್ಲಾಭಕ್ಷಿಯಿಂದ ಜಾನಪದ ಗೀತೆಗಳು ಜನರ ಮನಸೂರೆಗೊಂಡವು. ಕೀಬೋರ್ಡನಲ್ಲಿ ರಾಮಚಂದ್ರಪ್ಪ ಉಪ್ಪಾರ ಕೊಳಲಿನಲ್ಲಿ ನಾಗರಾಜ ಶ್ಯಾವಿ ತಬಲಾದಲ್ಲಿ ಮಾರುತಿ ದೊಡ್ಡಮನಿ ಹಾಗೂ ರಿಧಂ ಪ್ಯಾಡ್‌ನಲ್ಲಿ ವೆಂಕಟೇಶ ಹೊಸಮನಿ ಭಾಗವಹಿಸಿದ್ದರು.

Please follow and like us:
error