ಮತ್ತೆ ತುಂಬಿದ ತುಂಗಭದ್ರಾ ಡ್ಯಾಂ : ನದಿ ಪಾತ್ರದ ಜನತೆಗೆ ಎಚ್ಚರಿಕೆ

Kannadanet ಮಲೆನಾಡಿನಲ್ಲಿ ಮಳೆ ಅಬ್ಬರ ಮುಂದುವರೆದ ಪರಿಣಾಮ ಭದ್ರಾ ಜಲಾಶಯ ಭರ್ತಿಯಾಗಿ ಒಂದು ಲಕ್ಷ ನಲವತ್ತು ಸಾವಿರ ಕ್ಯೂಸೆಕ್ಸ್ ನೀರನ್ಮ ತುಂಗಭದ್ರ ನದಿಗೆ ಹರಿ ಬಿಡಲಾಗಿದೆ.ಇದರ ಪರಿಣಾಮ ಬಳ್ಳಾರಿ ಜಿಲ್ಲೆಯಲ್ಲಿ ಕೂಡ ತುಂಗಭದ್ರ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಜಿಲ್ಲೆಯ ಹಡಗಲಿ ಮತ್ತು ಹಗರಿಬೊಮ್ಮನಹಳ್ಳಿ ತಾಲೂಕಿನ ಕೆಲವು ಗ್ರಾಮಗಳಿಗೆ ಪ್ರವಾಹ ಭೀತಿ ಎದುರಾಗಲಿದೆ.ಇತ್ತ ತುಂಗಭದ್ರ ಜಲಾಶಯ ಈಗಾಗಲೆ ಭರ್ತಿಯಾಗಿದ್ದು ಬಾರಿ ಪ್ರಮಾಣದ ನೀರು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಎಚ್ಚೆತ್ತ ಟಿ.ಬಿ.ಬೋರ್ಡ್ ನಿನ್ನೆ ರಾತ್ರಿಯಿಂದಲೇ ಜಲಾಶಯದ ಹೊರ ಹರಿವನ್ನ ಹೆಚ್ವಳಮಾಡಿದೆ.ಈ ಸಂಭಂದ ಜಲಾಶಯದ ಕೆಳಬಾಗದಲ್ಲಿರುವ ನದಿ ಪಾತ್ರದ ಜನಸಾಮಾನ್ಯರಿಗೆ ಎಚ್ಚರಿಕೆ ಸಂದೇಶ ರವಾನಿಸಿರುವ ಟಿ.ಬಿ.ಬೋರ್ಡ್, ಅಲ್ಲದೆ ಈಗಿರುವ ಒಂದು ಲಕ್ಷ ಕ್ಯೂಸೆಕ್ಸ್ ಹೊರ ಹರಿವನ್ನ ಹಂತ ಹಂತವಾಗಿ ಹೆಚ್ಚಳಮಾಡುವ ಸಾಧ್ಯತೆ ಇದ್ದು ಜನ ಸಾಮಾನ್ಯರು ನದಿಗೆ ಇಳಿಯದಂತೆ ಎಚ್ಚರಿಕೆ ನೀಡಿದೆ.ಇದರಿಂದ ಜಲಾಶಯದ ಕೆಳಬಾಗದಲ್ಲಿ ಹರಿಯುವ ನದಿಯ ಪಾತ್ರದ ಗ್ರಾಮಗಳಲ್ಲಿ ಪ್ರವಾಹ ಬೀತಿ ಎದುರಾಗುವ ಸಾಧ್ಯತೆ ಇದೆ.ಇನ್ನು ನದಿಗೆ ನೀರು ಹರಿ ಬಿಟ್ಟ ಹಿನ್ನೆಲೆಯಲ್ಲಿ ವಿಶ್ವ ವಿಖ್ಯಾತ ಹಂಪಿಯ ಕೆಲವು ಸ್ಮಾರಕಗಳು ಮುಳುಗಡೆಯಾಗುವ ಸಾಧ್ಯತೆ ಇದೆ.ಕೋಟಿ ಲಿಂಗ ಲಕ್ಷ್ಮಿ ದೇವಸ್ಥಾನ, ಪುರಂದರ ಮಂಟಪಕ್ಕೆ ಸಂಪರ್ಕ ಕಲ್ಪಿಸುವ ದಾರಿ ಈಗಾಗಲೆ ಕಡಿತಗೊಂಡಿದ್ದು ಕೆಲವು ಸ್ಮಾರಕಗಳಿಗೆ ಪ್ರವೇಶವನ್ನ ಸಹ ನಿರ್ಭಂದಿಸಲಾಗಿದೆ.ಅಲ್ಲದೆ ಬಳ್ಳಾರಿ ಜಿಲ್ಲೆಯ ಕಂಪ್ಲಿ ಸೇತುವೆ ಕೂಡ ಮುಳುಗಡೆಯಾಗುವ ಸಾಧ್ಯತೆ ಕೂಡ ಇದೆ. ಇತ್ತ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ತುಂಗಭದ್ರ ಜಲಾಶಯದ 32ಕ್ರಷ್ಟ್ ಗೇಟ್ ಗಳಿಗೆ ಬಣ್ಣ ಬಣ್ಣದ ದೀಪಗಳ ಅಲಂಕಾರಮಾಡಲಾಗಿದೆ..

Please follow and like us:
error