ಮತವನ್ನು ಸ್ಕೇಲ್ ನಿಂದ ಅಳೆದ ಕೊಪ್ಪಳ ಚುನಾವಣಾಧಿಕಾರಿ

ಕೊಪ್ಪಳ: ಕೊಪ್ಪಳ ಗವಿಸಿದ್ದೇಶ್ವರ ಪ್ರೌಢ ಶಾಲಾ ಆವರಣದಲ್ಲಿ ನಡೆದ ಮತ ಎಣಿಕೆ ವೇಳೆ ಬ್ಯಾಲೇಟ್ ಪೇಪರ್ ನಲ್ಲಿ ಇಬ್ಬರು ಅಭ್ಯರ್ಥಿಗಳ ಮಧ್ಯೆ ಮತ ಚಲಾಯಿಸಿದ್ದನ್ನು ಚುನಾವಣಾ ಅಧಿಕಾರಿ ಮತವನ್ನ ಸ್ಕೇಲ್ ನಿಂದ ಅಳೆದು ಗಮನ ಸೆಳೆದರು.
ಗೊಂಡಬಾಳ ಗ್ರಾಪಂನ ಮುದ್ದಾಬಳ್ಳಿ ಒಂದನೇ ವಾರ್ಡಿನ ಮತ ಎಣಿಕೆಯ ವೇಳೆ ಟಿವಿ ಚಿನ್ಹೆಯ ಗಾಳೆಪ್ಪ ಪೂಜಾರ ಹಾಗೂ ಆಟೋ ಚಿನ್ಹೆಯ ಮಧ್ಯೆ ಮತದಾರನೋರ್ವ ಮತ ಚಲಾಯಿಸಿದ್ದನು. ಈ ಮತ ಎಣಿಕೆಯಿಂದ ಹೊರಗಿಟ್ಟು ಮತ ಎಣಿಕೆ ಮಾಡಲಾಗಿತ್ತು. ಕೊನೆ ಹಂತದಲ್ಲಿ ಇಬ್ಬರು ಅಭ್ಯರ್ಥಿಗಳ ಮಧ್ಯೆ ಚಲಾಯಿಸಲಾಗಿದ್ದ ಮತ ಎಣಿಕೆ ವೇಳೆ ಚುನಾವಣಾಧಿಕಾರಿ ಆ ಮತ ಸ್ಕೇಲ್ ನಿಂದ ಅಳತೆ ಮಾಡಿ ಟಿವಿ ಚಿನ್ಹೆಯ ಮತಕ್ಕೆ ಹೆಚ್ಚು ಪ್ರಾಶಸ್ತ್ಯ ಬಂದ ಹಿನ್ನೆಲೆಯಲ್ಲಿ ಟಿವಿ ಅಭ್ಯರ್ಥಿಗೆ ಮತ ಎಂದು ಘೋಷಣೆ ಮಾಡಿದರು.

Please follow and like us:
error