ಮಣಿಪಾಲ್ ಆಸ್ಪತ್ರೆಯ
ಡಾ.ಸುದರ್ಶನ ಬಲ್ಲಾಳರೊಂದಿಗೆ ಮಾಧ್ಯಮ-ಸಂವಾದ

ಕೋವಿಡ್ 2ನೇ ಅಲೆಯ ಸಂದರ್ಭದಲ್ಲಿ, ಮಾಧ್ಯಮದಲ್ಲಿ ಕೆಲಸ ಮಾಡುವ ಪತ್ರಕರ್ತರು ಮತ್ತು ಸಿಬ್ಬಂದಿಗಳು ಹಾಗೂ ಕುಟುಂಬ ಸದಸ್ಯರು ಆತಂಕದಲ್ಲಿಯೇ ಕಾಲ ದೂಡುತ್ತಿದ್ದಾರೆ.

ಇಂಥ ಸಂಕಷ್ಟದಲ್ಲಿ ಸಮಸ್ಯೆ ವಿರುದ್ಧ ವೃತ್ತಿ ಬದ್ಧತೆಯಿಂದ ಈಜುವುದು ನಿಜಕ್ಕೂ ಸವಾಲಿನ ಕೆಲಸ.

ಕೋವಿಡ್ ಮೊದಲ ಅಲೆಗಿಂತ, ಎರಡನೇ ಅಲೆ ಭಾರಿ ಅಪಾಯಕಾರಿ ಎನ್ನುವುದು ಮತ್ತೆ ಮತ್ತೆ ರುಜುವಾತು ಆಗುತ್ತಲೇ ಇದೆ. ಈ ದುರಿತ ಕಾಲದಲ್ಲಿ ಒತ್ತಡದಲ್ಲಿರುವ ಪತ್ರಕರ್ತರು ಸಾವಿನ ಮನೆ ಬಾಗಿಲು ಬಡಿದು, ಜೀವ ಕೈಯಲ್ಲಿಡಿದುಕೊಂಡು ಕೆಲಸ ಮಾಡುವುದು ಕೂಡ ಕಡು ಕಷ್ಟದ ಕೆಲಸ.

ಮೊದಲ ಕೋವಿಡ್ ಅಲೆಯ ಸಂದರ್ಭದಲ್ಲಿ ಇಂಥದ್ದೆ ಸಂದರ್ಭವನ್ನು ಮಾಧ್ಯಮ ಕ್ಷೇತ್ರ ಎದುರಿಸಿದ್ದರೂ, ಒಂದಿಷ್ಟು ಸಮಾಧಾನವಿತ್ತು. ಈಗ ಇನ್ನಷ್ಟು ಭಯನಾಕ, ಆತಂಕ ಸನ್ನಿವೇಶಗಳಿಗೆ ಸುದ್ದಿ ಮನೆ ಸಾಕ್ಷಿಯಾಗುತ್ತಿರುವುದು ನೋವಿನ ಸಂಗತಿ.

ಇಂತಹ ಹೊತ್ತಿನಲ್ಲಿ ನಾವು ಕನಿಷ್ಠ ಮುಂಜಾಗ್ರತೆ ವಹಿಸುವುದು, ಮುಂದೆ ಬಂದೊದಗಬಹುದಾದ ಸನ್ನಿವೇಶವನ್ನು ಧೈರ್ಯದಿಂದ ನಿಭಾಯಿಸುವುದು ನಮ್ಮ ಆದ್ಯತೆಯಾಗಬೇಕಿದೆ. ಸುದ್ದಿ ಮನೆಯಲ್ಲಿ ಪತ್ರಕರ್ತರು ಮತ್ತು ಸಿಬ್ಬಂದಿಗಳು, ಅವರ ಕುಟುಂಬದ ಕ್ಷೇಮ ಕೂಡ ಬಹುಮುಖ್ಯ. ಈ ನಿಟ್ಟಿನಲ್ಲಿ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (KUWJ) ಪುಟ್ಟ ಹೆಜ್ಜೆ ಇಟ್ಟಿದ್ದು, ಮೊದಲ ಕಂತಿನಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆಯ ಡಾ.ಸಿ.ಎನ್. ಮಂಜುನಾಥ್ ಅವರ ಜೊತೆಗೆ ಸಂವಾದ ನಡೆಸುವ ಮೂಲಕ ಹಲವು ಮಾಹಿತಿಯನ್ನು ಪಡೆದುಕೊಂಡಿದ್ದೇವೆ.

ಅದರ ಮುಂದುವರಿದ ಭಾಗವಾಗಿ ಕೆಯುಡಬ್ಲ್ಯೂಜೆ, ಮಣಿಪಾಲ್ ಆಸ್ಪತ್ರೆಗಳ ಚೇರ್ಮನ್ ಡಾ.ಸುದರ್ಶನ ಬಲ್ಲಾಳ ಅವರೊಂದಿಗೆ ಮಾಧ್ಯಮ ಸಂವಾದ 13.05.2021 ರಂದು ಗುರುವಾರ ಬೆಳಿಗ್ಗೆ 11.30ಕ್ಕೆ ಏರ್ಪಡಿಸಿದೆ.

ಕೋವಿಡ್ ಸಂದರ್ಭದಲ್ಲಿ ಪತ್ರಕರ್ತರ ಜವಾಬ್ದಾರಿ ಎಂಬ ವಿಷಯ ಬಗ್ಗೆ ಜೂಮ್ ಸಂವಾದದಲ್ಲಿ ನಮ್ಮ ಆತಂಕಗಳಿಗೆ ಡಾ.ಸುದರ್ಶನ ಬಲ್ಲಾಳ ಅವರಿಂದ
ಒಂದಿಷ್ಟು ಉತ್ತರ ಸಿಗಬಹುದು. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.
ಬನ್ನಿ, ನೀವೂ ಪಾಲ್ಗೊಳ್ಳಿ.

Please follow and like us:
error