ಮಂಡ್ಯದ ಮದ್ದೂರಿನಲ್ಲಿ ಕೆಯುಡಬ್ಲುಜೆ ವಾರ್ಷಿಕ ಮಹಾಸಭೆ ಯಶಸ್ವಿ

ಕನ್ನಡನೆಟ್ ನ್ಯೂಸ್ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ( KUWJ ) ವಾರ್ಷಿಕ ಮಹಾಸಭೆಯು ಮಂಡ್ಯ ಜಿಲ್ಲೆ ಮದ್ದೂರಿನ ವೆಂಕಟೇಶ್ವರ ಕಲ್ಯಾಣ ಮಂಟಪ ದಲ್ಲಿ ಮಂಗಳವಾರ ಯಶಸ್ವಿಯಾಗಿ ನಡೆಯಿತು.

ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ ಪತ್ರಕರ್ತರ ಆತಿಥ್ಯ ನೀಡಲು ಸ್ವಾಗತಕ್ಕಾಗಿ ಜನಪದ ಶೈಲಿಯ ಮೆರವಣಿಗೆಯೊಂದಿಗೆ ಕಾರ್ಯಕ್ರಮ ನಡೆಯುವ ಸಭಾಂಗಣದವರೆಗೆ ಸ್ವಾಗತಿಸಲಾಯಿತು .

ವಾರ್ಷಿಕ ಮಹಾ ಸಭೆಯನ್ನು ಮದ್ದೂರು ಕ್ಷೇತ್ರದ ಶಾಸಕ ಡಿ.ಸಿ. ತಮಣ್ಣ ನವರು ಉದ್ಘಾಟಿಸಿ ಮಾತನಾಡಿ , ನಮ್ಮ ಜಿಲ್ಲೆಯ ನಮ್ಮ ತಾಲೂಕಿನ ಪ್ರವಾಸಿ ತಾಣಗಳನ್ನು ನೋಡುವ ಆಕರ್ಷಣೀಯ ಕೇಂದ್ರವಾಗಿರುವುದು ಜೊತೆಗೆ ತಮ್ಮಗಳ ವಿಚಾರ ಮಂಡನೆಯ ಮಹಾಸಭೆಗೆ ಆಗಮಿಸಿದ್ದೀರಿ . ನಿಮ್ಮಗಳ ಅತಿಥಿ ಸತ್ಕಾರ ಮಾಡುವುದು ನನಗೆ ಸಿಕ್ಕಿರುವ ಅದೃಷ್ಟ ತಿಳಿಸಿದರು . ಪತ್ರಕರ್ತರ ಸರ್ವಸದಸ್ಯರ ಆಗಮಿಸಿರುವ ಪತ್ರಕರ್ತರಿಗೆ ಕಾಲ ಅವಕಾಶವಿದ್ದರೆ ಒಂದು ದಿನದ ಪ್ರವಾಸಿ ತಾಣಗಳು ಪರಿಚಯ ಮಾಡಿಕೊಡುವ ಭರವಸೆ ನೀಡಿದರು . ತಮ್ಮ ಅಧಿಕಾರ ಅವಧಿಯಲ್ಲಿ ಮದ್ದೂರಿನ ಅಭಿವೃದ್ಧಿಯ ಯೋಜನೆಗಳ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ್ದು ಈ ಕಾರ್ಯಕ್ರಮಕ್ಕೆ ಆಗಮಿಸುವ ಎಲ್ಲರಿಗೂ ಶುಭ ಕೋರುತ್ತಾ ಕಾರ್ಯಕ್ರಮಕ್ಕೆ ಯಶಸ್ವಿಯಾಗಲಿ ಎಂದು ಹಾರೈಸಿದರು . ಪತ್ರಕರ್ತರ ಸರ್ವಸದಸ್ಯರ ವಾರ್ಷಿಕ ಮಹಾಸಭೆಯ ಸಮಾರಂಭದಲ್ಲಿ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಸಭೆಯ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ರಾಷ್ಟ್ರೀಯ ಅಧ್ಯಕ್ಷ ಬಿ ವಿ ಮಲ್ಲಿಕಾರ್ಜುನಯ್ಯ , ರಾಜ್ಯ ಉಪಾಧ್ಯಕ್ಷ ಮತ್ತಿಕೆರೆ ಜಯರಾಂ ರಾಜ್ಯ ಸಂಘದ ಪದಾಧಿಕಾರಿಗಳು ಜಿಲ್ಲಾಧ್ಯಕ್ಷ ನವೀನ್ ಚಿಕ್ಕ ಮಂಡ್ಯ ಸಂಘದ ಪದಾಧಿಕಾರಿಗಳು ಕಾರ್ಯಕ್ರಮ ಸಮಾರಂಭದಲ್ಲಿ ಪಾಲ್ಗೊಂಡಿದ್ದರು . ವಾರ್ಷಿಕ ಮಹಾಸಭೆಯ ವರದಿಯನ್ನು ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯಲಾಯಿತು ಪತ್ರಕರ್ತರ ಸಮಸ್ಯೆಗಳ ಪ್ರಶ್ನೆಗಳಿಗೆ ಹಾಗೂ ಕಾರ್ಯರೂಪಕ್ಕೆ ತರುವುದನ್ನು ಸಭೆಯಲ್ಲಿ ಚರ್ಚಿಸಿ ಕಾರ್ಯರೂಪಕ್ಕೆ ತರುವ ಭರವಸೆ ನೀಡಿದರು.

Please follow and like us:
error