ಭಾವೈಕ್ಯತೆಯ ಸಂಕೇತ : ದಾವಲ್ ಮಲಿಕ್ ಮೊಹರಂ ದೇವರಿಗೆ ಹೂ ನೀಡುವ ಆಂಜನೇಯ!

ಕೊಪ್ಪಳ: ಭಾವೈಕ್ಯತೆ ಅಂದ್ರೆ ಇದಪ್ಪಾ. ಆತ ಇಸ್ಲಾಂ ಧರ್ಮದವನಾದರೂ ಆಂಜನೇಯನ ಭಕ್ತ. ಪ್ರತಿ ವರ್ಷ ಮೊಹರಂ ಹಬ್ಬದ ಕತ್ತಲ ರಾತ್ರಿ ದಿನ ಹಾಗೂ ದೇವರು ಹೊಳೆಗೆ ಹೋಗುವ ದಿನ ದೇವರ ಹೊರುವ ಆತನಿಗೆ ಆಂಜನೇಯ ಹೂ ನೀಡುತ್ತಾನೆ. ಆದರೆ ಈ ವರ್ಷ ಕತ್ತಲ ರಾತ್ರಿಯಂದು ಮಾತ್ರ ಹೂ ನೀಡಿದ್ದಾನೆ.

ಈ ಘಟನೆ ನಡೆದದ್ದು ಕೊಪ್ಪಳ ಜಿಲ್ಲೆಯ ಕವಲೂರು ಗ್ರಾಮದಲ್ಲಿ. ಕವಲೂರು ಭಾವೈಕ್ಯತೆಗೆ ಹೆಸರಾದ ಗ್ರಾಮವೂ ಹೌದು. ಇಸ್ಲಾ ಮತ್ತು ಹಿಂದು ಧರ್ಮದ ವಿವಿಧ ಕೋಮಿನ ಅನೇಕ ಕುಟುಂಬಗಳು ಹಲವು ವರ್ಷಗಳಿಂದ ವಾಸವಾಗಿದ್ದು, ಅನ್ಯೋನ್ಯವಾಗಿದ್ದಾರೆ.

ಗ್ರಾಮದ ಹಜಿಮ್‌ಸಾಬ್ ಇಸ್ಲಾಂ ಧರ್ಮದವನಾದರೂ ಹನುಮಂತನ ಪರಮ ಭಕ್ತ. ದಾವಲ್ ಮಲಿಕ್ ಮೊಹರಂ ದೇವರನ್ನೂ ಇಡುವ ಹಜಿಮ್‌ಸಾಬ್‌ಗೆ ಗ್ರಾಮದ ಆಂಜನೇಯ ಪ್ರತಿ ವರ್ಷ ಕತ್ತಲ ರಾತ್ರಿಯಂದು ಮತ್ತು ದೇವರು ಹೊಳೆಗೆ ಹೋಗುವ ದಿನ ಹೂ ನೀಡುತ್ತಿದ್ದ. ಈ ವರ್ಷ ಕೊರೋನಾ ಇರುವುದರಿಂದ ಕತ್ತಲ ರಾತ್ರಿಯಂದು ಮಾತ್ರ ಹೂ ನೀಡಿದ್ದಾನೆ. ಹಜಿಮ್‌ಸಾಬ್‌ಗೆ ಆಂಜನೇಯ ಹೂ ಕೊಡುವ ದೃಶ್ಯವನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು, ಇದು ಈಗ ಎಲ್ಲೆಡೆ ವೈರಲ್ ಆಗಿದೆ.

Please follow and like us:
error