ಭರ್ಜರಿ ಟ್ರಾಕ್ಟರ್ ರ್ಯಾಲಿ ಮೂಲಕ ಕಾಂಗ್ರೆಸ್ ಪ್ರತಿಭಟನೆ

ಕನ್ನಡನೆಟ್ ನ್ಯೂಸ್ : , ಕೇಂದ್ರ ಸರ್ಕಾರದ  ಕೃಷಿ ಮತ್ತು ಎಪಿಎಂಸಿ ತಿದ್ದುಪಡಿ ಕಾಯ್ದೆ ವಿರುದ್ಧ ಹಾಗೂ ಬೆಲೆ ಏರಿಕೆಯ ವಿರುದ್ದ ಕೊಪ್ಪಳ ಜಿಲ್ಲೆಯ ಲ್ಲಿ ಬೃಹತ್ ಟ್ರ್ಯಾಕ್ಟರ್ ಗ್ಯಾಲಿ ನಡೆಯಿತು . ಕೊಪ್ಪಳ ಜಿಲ್ಲೆ ಕನಕಗಿರಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಆಯೋಜಿಸಿದ್ದ ಪ್ರತಿಭಟನೆ ಭಾಗವಾಗಿ ಟ್ರ್ಯಾಕ್ಟರ್‌ ಲ್ಯಾಲಿ ನಡೆಯಿತು . ರಾಜ್ಯದಲ್ಲಿಯೇ ಮೊದಲ ಬಾರಿಗೆ ಕಾಂಗ್ರೆಸ್ ಟ್ರಾಕ್ಟರ್ ರ್ಯಾಲಿ ಮೂಲಕ ಪ್ರತಿಭಟನೆಗಿಳಿದಿದೆ.

ಕನಕಗಿರಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಜಂಗಮರ ಕಲ್ಲುಡಿ ಗ್ರಾಮದಿಂದ ರ್ಯಾಲಿ ಆರಂಭವಾಗಿದ್ದು , ಸಿದ್ದಾಪೂರ- ಕಾರಟಗಿ ನವಲಿ ಮಾರ್ಗವಾಗಿ ಕನಕಗಿರಿ ತಲುಪಲಿದೆ . ರ್ಯಾಲಿಯಲ್ಲಿ ೪೦೦  ಟ್ರ್ಯಾಕ್ಟರ್‌ ಭಾಗಿಯಾಗಿದ್ದು  ಪ್ರತಿಭಟನೆಯ  ನಡುವೆ ಮತ್ತಷ್ಟು ಟ್ರ್ಯಾಕ್ಟರ್‌ ಸೇರಿಕೊಳ್ಳುವ ಸಾಧ್ಯತೆ ಇದೆ . ಮಾಜಿ ಸಚಿವ ಹಾಗೂ ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವರಾಜ ತಂಗಡಗಿ ನೇತೃತ್ವದಲ್ಲಿ ರ್ಯಾಲಿ ಆಯೋಜಿಸಲಾಗಿದ್ದು , ಮಾಜಿ ಸಂಸದ ಶಿವರಾಮಗೌಡ , ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಭಾಗಿಯಾಗಿದ್ದಾರೆ . ವಾಹನಗಳ ದಾಖಲೆ ಪರಿಶೀಲನೆ : ರ್ಯಾಲಿಯಲ್ಲಿ ಭಾಗವಹಿಸುವ ಟ್ರ್ಯಾಕ್ಟರ್‌ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ . RTO ಅಧಿಕಾರಿಗಳು ಆಗಮಿಸಿ , ಚಾಲಕರ ಲೈಸೆನ್ಸ್ ಮತ್ತು ದಾಖಲಾತಿ ಇರುವ ಟ್ರ್ಯಾಕ್ಟರ್‌ಗಳಿಗೆ ಮಾತ್ರ ಗ್ಯಾಲಿಯಲ್ಲಿ ಭಾಗವಹಿಸಲು ಅವಕಾಶ ನೀಡುವುದಾಗಿ ತಿಳಿಸಿದ್ದಾರೆ . ಅಧಿಕಾರಿಗಳ ಕ್ರಮವನ್ನು ಕಾಂಗ್ರೆಸ್ ನಾಯಕರು ವಿರೋಧಿಸಿದ್ದು , ಆರ್ ಟಿ ಓ ಹಾಗೂ ಪೊಲೀಸ್ರ ವಿರುದ್ಧ ಕಾಂಗ್ರೆಸ್ ನಾಯಕರ ಆಕ್ರೋಶ  ವ್ಯಕ್ತಪಡಿಸಿದರು . ಪೋಲಿಸ, ಆರ್ ಟಿಓ ಅಧಿಕಾರಿಗಳ ಮೇಲೆ ಒತ್ತಡ ಹಾಕಲಾಗಿದೆ ಎಂದು ಶಾಸಕರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.  

Please follow and like us:
error