ಬೇವೂರ ಬ್ಯಾಂಕ್ ದರೋಡೆ ಪ್ರಕರಣ : ಇಬ್ಬರ ಬಂಧನ

ಕೊಪ್ಪಳ : ರಾಜ್ಯದ ತೀವ್ರ ಗಮನ ಸೆಳೆದಿದ್ದ ಬೇವೂರು ಬ್ಯಾಂಕ್ ದರೋಡೆ ಪ್ರಕರಣವನ್ನು ಬೇದಿಸುವಲ್ಲಿ ಕೊಪ್ಪಳ ಪೋಲಿಸರು ಯಶಸ್ವಿಯಾಗಿದ್ದಾರೆ. ಒಂದೇ ಒಂದು ಸುಳಿವೂ ಇಲ್ಲದ ಕೇಸ್ ನ ಬೆನ್ನುಬಿದ್ದ ಕೊಪ್ಪಳ ಜಿಲ್ಲೆಯ ದಕ್ಷ ಚಾಣಾಕ್ಷ ಪೋಲಿಸರ ಟೀಂ ದರೋಡೆಕೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಇಬ್ಬರು ಅಂತಾರಾಜ್ಯ ದರೋಡೆಕೋರರು ಪೋಲಿಸರ ಬಲೆಗೆ ಬಿದ್ದಿದ್ದಾರೆ . ಸಿಸಿ ಕ್ಯಾಮೆರಾ ಫೂಟೇಜ್, ಸಿಡಿ ಆರ್ ಮಾಹಿತಿ ಸಹ ಇರಲಿಲ್ಲ. ಇಂಥ ಕ್ಲಿಷ್ಟಕರ ಪ್ರಕರಣವನ್ನು ಕೇವಲ 13 ದಿನಗಳಲ್ಲಿ ಪತ್ತೆ ಮಾಡಿ ಹತ್ತು ಜನ ಆರೋಪಿಗಳ ಪೈಕಿ ಇಬ್ಬರನ್ನು ಬಂದಿಸಲಾಗಿದೆ. 3,761 ಗ್ರಾಂ ಚಿನ್ನಾಭರಣ, 21 ಲಕ್ಷ ರೂಪಾಯಿ ನಗದು ಸೇರಿದಂತೆ 1.46 ಕೋಟಿ ಮೌಲ್ಯದ ವಸ್ತು ದೋಚಿದ್ದ ಖದೀಮರ ಬೆನ್ನತ್ತಿದ್ದ ಟೀಮ ಮಹಾರಾಷ್ಟ್ರ ದಿಂದ ಪ್ರಶಾಂತ ಮತ್ತು ಹರಿದಾಸ ಬಂಧಿತ ಆರೋಪಿಗಳನ್ನು ಬಂದಿಸಿ ಕರೆತಂದಿದ್ದಾರೆ.ಬಂಧಿತ ಇಬ್ಬರಿಂದ 13.81 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ನಗದು ವಶಪಡಿಸಿಕೊಳ್ಳಲಾಗಿದೆ.

ಮಹಾರಾಷ್ಟ್ರದ ನಾಲ್ವರು ಮತ್ತು ಉತ್ತರ ಪ್ರದೇಶದ ಆರು ಜನರಿಂದ ದರೋಡೆ ನಡೆದಿರುವುದನ್ನು ಬಾಯಿಬಿಟ್ಟಿದ್ದಾರೆ. ಮಹಾರಾಷ್ಟ್ರದ ಸಂತೋಷ್ ಬ್ಯಾಂಕ್ ಲೂಟಿ ಗ್ಯಾಂಗ್‌ನ ರೂವಾರಿ. ಇವರು ತಮ್ಮೊಂದಿಗೆ ಉತ್ತರ ಪ್ರದೇಶದ ಕೆಲವರನ್ನು ಸೇರಿಸಿಕೊಂಡು ತಂಡ ರಚಿಸಿಕೊಂಡು ಈ ರೀತಿಯ ಗ್ರಾಮೀಣ ಬ್ಯಾಂಕ್ ಗಳನ್ನೇ ಗುರಿಯಾಗಿಸಿ ಲೂಟಿ ಮಾಡುತ್ತಿದ್ದರು. ಕೆಲವೇ ದಿನಗಳ ಹಿಂದೆ ರಾಜಮಂಡ್ರಿಯಿಂದ ಬಂದಿದ್ದವರು ಈ ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಇನ್ನುಳಿದ ಆರೋಪಿಗಳ ಪತ್ತೆಗೆ ಜಾಲ ಬೀಸಲಾಗಿದ್ದು ಶೀಘ್ರವೇ ಪತ್ತೆ ಹಚ್ಚಲಾಗುವುದು. ಪೋಲಿಸರ ತಂಡ ಜೀವದ ಹಂಗು ತೊರೆದು ಚಾಣಾಕ್ಷತನದಿಂದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಅವರಿಗೆ ಬಹುಮಾನ ನೀಡಲಾಗುವುದು ಎಂದು ಎಸ್ಪಿ ಜಿ.ಸಂಗೀತಾ

ಹೇಳಿದರು.

ಎಸ್ಪಿಯವರ ಮಾರ್ಗದರ್ಶನದಲ್ಲಿ ಹಾಗೂ ಆರ್‌ಎಸ್ , ಉಜ್ಜನಕೊಪ್ಪ ಡಿಎಸ್ಪಿ , ಗಂಗಾವತಿ ಪ್ರಭಾರ ಕೊಪ್ಪಳ ಉಪ – ವಿಭಾಗ ರವರ ಮಾರ್ಗದರ್ಶನದಲ್ಲಿ ಎಂ , ನಾಗರೆಡ್ಡಿ , ಸಿಪಿಐ ಯಲಬುರ್ಗಾ ವೃತ್ತ ರವರ ನೇತೃತ್ವದಲ್ಲಿ ಶಿವರಾಜ ಇಂಗಳೆ ಪಿಐ , ಡಿಸಿಆರ್‌ಬಿ ಘಟಕ ಕೊಪ್ಪಳ , ವೆಂಕಟೇಶ ಎನ್ , ಪಿಎಸ್‌ಐ ಕುಕನೂರ , ಅಮರೇಶ ಹುಬ್ಬಳ್ಳಿ ಪಿಎಸ್ಐ , ಡಿಸಿಐಬಿ ಘಟಕ ಕೊಪ್ಪಳ ಹಾಗೂ ಸಿಬ್ಬಂದಿಯವರಾದ ವೆಂಕಟೇಶ ಸಿ.ಹೆಚ್.ಸಿ -64 , ಶ್ರೀ ವೆಂಕಟೇಶ ಹೆಚ್.ಸಿ -74 , ಸಣವೀರಣ , ಹೆಚ್.ಸಿ -73 , ಅಶೋಕ ಹೆಚ್.ಸಿ -04 , ತಾರಾಸಿಂಗ್ ಪಿಸಿ 151 , ದೇವೇಂದ್ರಪ್ಪ ಪಿಸಿ -120 , ರವಿ ರಾಠೋಡ್ ಪಿಸಿ -509 , ವಿಶ್ವನಾಥ ಪಿಸಿ -457 , ಶರಣಪ್ಪ ಎಪಿಸಿ -25 , ಮಹಾಂತಗೌಡ ಪಿ.ಸಿ -392 , ರವಿಶಂಕರ ಪಿಸಿ -133 ಹಾಗೂ ತಾಂತ್ರಿಕ ವಿಭಾಗದವರಾದ ಪ್ರಸಾದ ವಿ.ಪಿ.ಸಿ -166 , ಕೊಟೇಶ ರವರ ಸಿಬ್ಬಂದಿಯನ್ನೊಳಗೊಂಡಂತೆ ಮೂರು ತಂಡಗಳನ್ನು ರಚಿಸಲಾಗಿತ್ತು. ಇದೇ ತಂಡ ಪ್ರಕರಣ ಬೇಧಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಡಿಎಸ್ಪಿ ರುದ್ರೇಶ್ ಉಜ್ಜನಿಕೊಪ್ಪ, ವೆಂಕಟಪ್ಪ ನಾಯಕ್, ಸಿಪಿಐ ನಾಗಿರೆಡ್ಡಿ, ಪಿಎಸೈ ಅಮರೇಶ ಹುಬ್ಬಳ್ಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Please follow and like us:
error