ಬೇವೂರು ಬ್ಯಾಂಕ್ ದರೋಡೆ : ಸಿಸಿಟಿವಿ ಹಾರ್ಡಡಿಸ್ಕ್ ನ್ನೂ ಕದ್ದೊಯ್ದ ಕಳ್ಳರು

ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕು ಬೇವೂರು ಗ್ರಾಮದಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಗೆ ನಿನ್ನೆ ರಾತ್ರಿ ಕನ್ನ ಹಾಕಿರೋ ದರೋಡೆಕೋರರ ಗ್ಯಾಂಗ್ ವೊಂದು ಗ್ಯಾಸ್ ಕಟ್ಟರ್ ಮೂಲಕ ಬ್ಯಾಂಕ್ ನ ಕಬ್ಬಿಣದ ಶಟ್ಟರ್ ಅಂದ್ರೆ ಬಾಗಿಲು ಕತ್ತರಿಸಿ ದರೋಡೆ ಮಾಡಿದೆ. ಬ್ಯಾಂಕ್ ನಲ್ಲಿದ್ದ ನಗದು, ಗ್ರಾಹಕರು ಅಡಮಾನ ಇಟ್ಟಿರುವ ಚಿನ್ನಾಭರಣ ಸೇರಿ ಬರೋಬ್ಬರಿ 1 ಕೋಟಿ ಮೌಲ್ಯದ ಚಿನ್ನಾಭರಣ ದೋಚಿದೆ. ನಿನ್ನೆ ತಡರಾತ್ರಿ ಕೃತ್ಯ ನಡೆದಿದೆ ಎನ್ನಲಾಗಿದ್ದು, ಇಂದು ಬೆಳಗ್ಗೆ ಸಾರ್ವಜನಿಕರು, ಬ್ಯಾಂಕ್ ಬಾಗಿಲು ಕತ್ತರಿಸಿರೋದನ್ನು ನೋಡಿ ಮ್ಯಾನೇಜರ್ ಗೆ ಮಾಹಿತಿ ನೀಡಿದ್ದಾರೆ. ಬ್ಯಾಂಕ್ ಮ್ಯಾನೇಜರ್ ರವಿ ಪೊಲೀಸರಿಗೆ ಮಾಹಿತಿ ನೀಡಿ, ಅಧಿಕಾರಿಗಳ ಸಮೇತ ಬ್ಯಾಂಕ್ ಗೆ ಬಂದಿದ್ದಾರೆ. ಬಂದ ಕೂಡಲೇ ಸಿಸಿ ಕ್ಯಾಮೆರಾ ನೋಡಿರುವ ಪೊಲೀಸರಿ ಖದೀಮರು ಶಾಕ್ ಕೊಟ್ಟಿದ್ದಾರೆ. ದರೋಡೆಕೋರರು ಸಿಸಿ ಕ್ಯಾಮೆರಾದ ಹಾರ್ಡ್ ಡಿಸ್ಕ ಅನ್ನೂ ಕದ್ದೊಯ್ದಿದ್ದಾರೆ.
ಕೊಪ್ಪಳ ಜಿಲ್ಲೆಯ ಮಟ್ಟಿಗೆ ಇದು ದೊಡ್ಡ‌ ದರೋಡೆ ಪ್ರಕರಣ ಎಂದೇ ಹೇಳಬಹುದು. ಇನ್ನು ಖದೀಮರು ಪೊಲೀಸರ ತನಿಖೆಗೆ ಒಂದಷ್ಟು ಸಹಾಯ ಆಗಬಲ್ಲ ಸಿಸಿ ಕ್ಯಾಮೆರಾದ ಹಾರ್ಡ್ ಡಿಸ್ಕ ಅನ್ನೇ ಲಪಟಾಯಿಸಿದ್ದು, ತನಿಖಾಧಿಕಾರಿಗಳಿಗೆ ಪ್ರಕರಣದ ಆರೋಪಿಗಳ ಪತ್ತೆ ಸವಾಲಾಗಿದೆ.

Please follow and like us:
error