ಬೆಳ್ಳಂಬೆಳಿಗ್ಗೆ ಜವರಾಯನ ಅಟ್ಟಹಾಸ : ಅಪಘಾತದಲ್ಲಿ ಐವರ ಸಾವು

ಚಿತ್ರದುರ್ಗ: KSRTC ಬಸ್ ಹಾಗೂ ಕ್ರೂಸರ್ ನಡುವೆ ಮುಖಾಮುಖಿ ಡಿಕ್ಕಿಯಿಂದಾಗಿ ಐವರು ಸಾವನ್ನಪ್ಪಿದ್ದಾರೆ.ಕ್ರೂಸರ ನಲ್ಲಿದ್ದ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರ ಸ್ಥಿತಿ ಚಿಂತಾಜನಕವಾಗಿದೆ. ನಾಲ್ವರಿಗೆ ಗಂಬೀರ ಗಾಯಗಳಾಗಿವೆ.ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲ್ಲೂಕಿನ ಬಿಜಿ ಕೆರೆ ಗ್ರಾಮದ ಬಳಿ ಘಟನೆ ನಡೆದಿದೆ.

ಬೆಳಗಿನ ಜಾವ ಜವರಾಯನ ಅಟ್ಟಹಾಸ ಮೆರೆದಿದ್ದು KSRTC ಚಾಲಕನ ನಿರ್ಲಕ್ಷಕ್ಕೆ ಐವರ ಬಲಿಯಾಗಿದ್ದಾರೆ. ಗಾಯಾಳುಗಳ ಚಿಕಿತ್ಸೆಗೆ ಚಳ್ಳಕೆರೆ , ಚಿತ್ರದುರ್ಗ ಆಸ್ಪತ್ರೆಗೆರವಾನಿಸಲಾಗಿದೆ. .ರಾಯಚೂರು ಜಿಲ್ಲೆ ದೇವದುರ್ಗ ತಾ. ಹೊಸೂರು ಗ್ರಾಮದ , ತಿಮ್ಮಣ್ಣ (40) ಪತ್ನಿ ರತ್ನಮ್ಮ (38) ಸೋಮನ ಮರಡಿ ಗ್ರಾಮದ
ದುರುಗಪ್ಪ, (16) ಗಜಿಲಿ ಗ್ರಾಮದ ಮಹೇಶ (19) ಹಾಗೂ 55 ವರ್ಷದ ಓರ್ವ ಮೃತರು. ತಿಮ್ಮಣ್ಣ (40) ಪತ್ನಿ ರತ್ನಮ್ಮ (38)
ದುರುಗಪ್ಪ, (16) ಮೃತರು.

ಬೆಂಗಳೂರಿಗೆ ಕೂಲಿ ಕೆಲಸಕ್ಕೆ ತೆರಳುತ್ತಿದ್ದ ರಾಯಚೂರು ಮೂಲದ ಕಾರ್ಮಿಕರು. ಸ್ಥಳಕ್ಕೆ ಮೊಳಕಾಲ್ಮೂರು PSI ಬಸವರಾಜ್ ಬೇಟಿ, ಪರಿಶೀಲನೆ ನಡೆಸಿದ್ದಾರೆ.

Please follow and like us:
error