ಬೆಳ್ಳಂಬೆಳಿಗ್ಗೆ ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ

ರಾಯಚೂರು/ಬಾಗಲಕೋಟೆ : ಭ್ರಷ್ಟ ಅಧಿಕಾರಿಗಳ ಮನೆಯ ಮೇಲೆ ಬೆಳ್ಳಂಬೆಳಿಗ್ಗೆ ಎಸಿಬಿ ದಾಳಿ ನಡೆದಿದೆ.

ರಾಯಚೂರಿನಲ್ಲಿ ನಗರಾಭಿವೃದ್ದಿ ಕೋಶ ಇಂಜಿನೀಯರ್ ಮನೆಯ ಮೇಲೆ ಎಸಿಬಿ ಅಧಿಕಾರಿಗಳ ದಾಳಿ ಮಾಡಿದ್ದಾರೆ. ರಾಯಚೂರು ಐ ಡಿ ಎಸ್ ಎಂ ಟಿ ಬಡಾವಣೆಯಲ್ಲಿರುವ ನಗರಾಭಿವೃದ್ಧಿ ಕೋಶದ ಇಂಜಿನೀಯರ್ ಮಲ್ಲಿಕಾರ್ಜುನ ಗೋಪಶೆಟ್ಟಿ ಮನೆಯ ಮೇಲೆ ದಾಳಿ

ಮಾಡಿದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ಬಾಗಲಕೋಟೆಯಲ್ಲಿಯೂ ಬೆಳ್ಳಂಬೆಳಿಗ್ಗೆ ಎಸಿಬಿ ಏಕಕಾಲಕ್ಕೆ ‌ಮೂರು ಕಡೆ ದಾಳಿ ಮಾಡಿದ್ದಾರೆ. ಕೃಷ್ಣಾಭಾಗ್ಯ ಜಲನಿಗಮ ಅಸಿಂಸ್ಟಂಟ್ ಎಂಜಿನಿಯರ್ ಮನೆ ಹಾಗೂ ಕಚೇರಿ ಮೇಲೆ ದಾಳಿ ಮಾಡಲಾಗಿದೆ
ಆರ್ ಎಲ್ ಲಮಾಣಿ ಅಸಿಸ್ಟಂಟ್ ಎಂಜಿನಿಯರ್ ಬಾಗಲಕೋಟೆಯ ವಿದ್ಯಾಗಿರಿ, ಬಾಗಲಕೋಟೆ ಸಮೀಪದ ಸೀಗಿಕೇರಿ ತಾಂಡಾದ ಮನೆ ಕಾರ್ಯ ನಿರ್ವಹಿಸುತ್ತಿರುವ ಆಲಮಟ್ಟಿ ಕಚೇರಿ ಮೇಲೆ ಏಕಕಾಲಕ್ಕೆ ದಾಳಿ ಮಾಡಲಾಗಿದೆ.
ಎಸಿಬಿ ಡಿ ವೈ ಎಸ್ ಪಿ ಗಣಪತಿ ಗುಡಾಜಿ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ. ಅಕ್ರಮ ಆಸ್ತಿ ದೂರು ಬಂದ ಹಿನ್ನೆಲೆ ದಾಳಿಮಾಡಿದ
ಎಸಿಬಿ ಅಧಿಕಾರಿಗಳಿಂದ ದಾಖಲಾತಿಗಳ ಪರಿಶೀಲನೆ ಮಾಡಲಾಗುತ್ತಿದೆ.

Please follow and like us:
error