ನನ್ನ , ಪರಮೇಶ್ವರ ಸಂಬಂಧ , ಕೆಲಸ ಚೆನ್ನಾಗಿದೆ : ಈಶ್ವರಪ್ಪನಿಗೆ ಸಿಎಂ ತಿರುಗೇಟು

cm_siddaramayya: ” ನನ್ನ, ಪರಮೇಶ್ವರ  ಸಂಬಂಧ  ಕೆಲಸ ಚೆನ್ನಾಗಿದೆ. ಬೆಂಕಿ ಹಚ್ಚುವ ಕೆಲಸ ಮಾಡಬೇಡಿ ”ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಈಶ್ವರಪ್ಪನವರಿಗೆ ಟಾಂಗ್ ನೀಡಿದ್ದಾರೆ.
ವಿಧಾನ ಪರಿಷತ್ ನಲ್ಲಿ ಶೂನ್ಯವೇಳೆಯಲ್ಲಿ ನಡೆದ ಪ್ರಶ್ನೆಯೊಂದಕ್ಕೆ ಉತ್ತರಿಸಿರುವ ವೇಳೆ  ಸಿಎಂ ಮತ್ತು ಈಶ್ವರಪ್ಪ ಅನಗತ್ಯವಾಗಿ ಪರಸ್ಪರ ತಮ್ಮ ಮತ್ತು ಪಕ್ಷದ ಅಧ್ಯಕ್ಷರ ಸಂಬಂಧದ ಬಗ್ಗೆ ಮಾತನಾಡಿದರು.
ಸದಸ್ಯ ರಾಮಚಂದ್ರ ಗೌಡ ಅವರು ಸುವರ್ಣ ಸೌಧಕ್ಕೆ ಪೊಲೀಸರ ನಿಯೋಜನೆ ವಿಚಾರವನ್ನು ಪ್ರಸ್ತಾಪಿಸಿದರು. ಈ ಸಂಬಂಧ ಗೃಹ ಸಚಿವ ಡಾ. ಜಿ.ಪರಮೇಶ್ವರ ಉತ್ತರ ನೀಡುವ ವೇಳೆ ಉತ್ತರ ನೀಡುವ ವೇಳೆ ಈಶ್ವರಪ್ಪ ಅವರು ಮಧ್ಯ ಪ್ರವೇಶಿಸಿ ಸಿಎಂ ಅವರ ಕಾಲೆಳೆಯುವ ಪ್ರಯತ್ನ ಮಾಡಿದರು.

” ನನ್ನ ಮತ್ತು ಪರಮೇಶ್ವರ ಸಂಬಂಧದ ಬಗ್ಗೆ ಮಾತನಾಡುತ್ತಿರಿ. ನಮ್ಮ ಸಂಬಂಧ ಚೆನ್ನಾಗಿದೆ. ಆದರೆ ನಿಮ್ಮದು, ಯಡಿಯೂರಪ್ಪ ನಡುವೆ ಸಂಬಂಧ ಏನಾಗಿದೆ ? ನಿಮ್ಮ ಹಾಗೂ ಯಡಿಯೂರಪ್ಪ ನಡುವೆ  ಬೆಂಕಿ ಹೊತ್ತಿ ಉರಿಯುತ್ತಿದೆ” ಎಂದು ಹೇಳಿದರು.
ಸಿಎಂಗೆ ಸಾಥ್‌ ನೀಡಿದ ಸದಸ್ಯ ಬಸವರಾಜ ಹೊರಟ್ಟಿ ” ಯಡಿಯೂರಪ್ಪನ ಹೆಸರು ಎತ್ತಿದರೆ ಮಾತೇ ಹೊರಡುತ್ತಿಲ್ಲ”  ಎಂದು ಈಶ್ವರಪ್ಪರನ್ನು ಕುಟುಕಿದರು.
“ನಾನು , ಯಡಿಯೂರಪ್ಪ ಅಣ್ಣ ತಮ್ಮ ಇದ್ದಂತೆ. ಬಿಜೆಪಿಯನ್ನು ಅಧಿಕಾರಕ್ಕೆ ತಂದು ಮಂದೆ ಅವರನ್ನು ಸಿಎಂ ಮಾಡುತ್ತೇವೆ ” ಎಂದು ಕೆ.ಎಸ್‌.ಈಶ್ವರಪ್ಪ ತಿರುಗೇಟು  ಹೇಳಿದರು.

Leave a Reply