ಬೆಂಗಳೂರು ಮಂಗಳೂರು ಗೋಲಿಬಾರ್ ಘಟನೆಯ ಉನ್ನತ ಮಟ್ಟದ ತನಿಖೆಯಾಗಬೇಕು -ಸಿದ್ದರಾಮಯ್ಯ

:  ಬೆಂಗಳೂರು , ಡಿ . 20 : ಮಂಗಳೂರಿನಲ್ಲಿ ಗುರುವಾರ ನಡೆದ ಗೊಲಿಬಾರ್ ಘಟನೆ ಅಮಾನವೀಯ , ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದವರ ಮೇಲೆ ಪೊಲೀಸರು ವಿನಾ ಕಾರಣ ಗುಂಡು ಹಾರಿಸಿದ್ದಾರೆ . ಈ ಘಟನೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ . ಘಟನೆಯ ಬಗ್ಗೆ ಹೈಕೋರ್ಟ್ 
ನ್ಯಾಯಮೂರ್ತಿಯಿಂದ ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಗೊಳ್ಳಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಶುಕ್ರವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು . ಪ್ರತಿಭಟನೆ ಹತ್ತಿಕ್ಕುವ ಅಧಿಕಾರವನ್ನು ಸಂವಿಧಾನದಲ್ಲಿ ಯಾರಿಗೂ ಕೊಟ್ಟಿಲ್ಲ . ದೇಶದ ಅನೇಕ ರಾಜ್ಯಗಳಲ್ಲಿ ಇವತ್ತು ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಜನರ ಆಕ್ರೋಶ ವ್ಯಕ್ತವಾಗಿದೆ . ಎಲ್ಲ ಧರ್ಮ – ಜಾತಿಯವರೂ ಪ್ರತಿಭಟಿಸುತ್ತಿದ್ದಾರೆ ಎಂದು ಸಿದ್ಧರಾಮಯ್ಯ ಹೇಳಿದ್ದಾರೆ . ಒಂದು ಕಡೆ ಯಡಿಯೂರಪ್ಪ ಗುಂಡು ಹಾರಿಸಬೇಡಿ ಅಂತಾರೆ .  ಅವರ ಆದೇಶಕ್ಕೆ ಪೊಲೀಸರು ತಿಮ್ಮತು ಕೊಡುತ್ತಿಲ್ಲ . ಯಡಿಯೂರಪ್ಪ ಸುಳ್ಳು ಹೇಳುತ್ತಿರಬಹುದು ಅಥವಾ ಅವರ ಮಾತು ಪೊಲೀಸರು ಕೇಳುತ್ತಿಲ್ಲ ಅನ್ನಬೇಕು . ನನ್ನ ಪ್ರಕಾರ ಸರಕಾರದ ಗಮನಕ್ಕೆ ತರದೆ | ಗೋಲಿಬಾರ್ ಮಾಡಲು ಸಾಧ್ಯವಿಲ್ಲ . ಇವರ ಉದ್ದೇಶವೇನು ಅಂದರೆ ಎರಡು ಧರ್ಮಗಳ ನಡುವೆ ಬೆಂಕಿ ಹಚ್ಚಿ ರಾಜಕೀಯ ಲಾಭ ಪಡೆದುಕೊಳ್ಳಲು ಬಿಜೆಪಿ ಪ್ರಯತ್ನ ಮಾಡುತ್ತಿದೆ . ಕೇಂದ್ರ ಸಚಿವ ಸುರೇಶ್ ಅಂಗಡಿ ಕಂಡಲ್ಲಿ ಗುಂಡಿಕ್ಕಿ ಅಂತ ಹೇಳುತ್ತಾರೆ . ಇದೆಂತಹ ದೇಶ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು . ಜನರ ಹಕ್ಕು ಹಾಗೂ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ಇದು . ಅಮಾನವೀಯವಾಗಿ ಇಬ್ಬರು ಅಮಾಯಕರನ್ನು ಗುಂಡಿಟ್ಟು ಕೊಂದಿದ್ದಾರೆ . ಇದನ್ನು ತೀವ್ರವಾಗಿ ಖಂಡಿಸುತ್ತೇನೆ . ಈ ಜವಾಬ್ದಾರಿಯನ್ನು ಸರಕಾರ ಹೊರಬೇಕು . ಸರಕಾರ | ಸಂವಿಧಾನಬಾಹಿರವಾಗಿ ಕೆಲಸ ಮಾಡುತ್ತಿದೆ . ಇದರ ಹಿಂದೆ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರಿದ್ದಾರೆ ಎಂದು ಆರೋಪಿಸಿದರು .

Please follow and like us:
error