ಬೃಹತ್ ಗಾತ್ರದ ಹೆಬ್ಬಾವು ಸೆರೆ

ಕಾರವಾರ : ಕಾರವಾರ ನಗರದ ಬಾಡ ಐಟಿಐ ಕಾಲೇಜು ಬಳಿಯ ಗಟಾರದಲ್ಲಿ ಬೃಹತ್ ಹೆಬ್ಬಾವು ಪತ್ತೆಯಾದ ಹಿನ್ನಲೆ ಸ್ಥಳೀಯರು ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಡೆಪ್ಯೂಟಿ ಆರ್‌ಎಫ್‌ಓ ಹನುಮಂತ, ಅರಣ್ಯ ರಕ್ಷಕ ಗೋಪಾಲ ನಾಯ್ಕ, ವಾಚರ್ ಸಂಜೀವ್ ಹಾಗೂ ನೀಲೇಶ್ ಸ್ಥಳೀಯರ ಸಹಕಾರದಲ್ಲಿ ಹೆಬ್ಬಾವನ್ನ ಹಿಡಿದು ಅದನ್ನ ಚೀಲದಲ್ಲಿ ತುಂಬುವಾಗ ಹಾವು ತಪ್ಪಿಸಿಕೊಂಡಿತ್ತು. ಬಳಿಕ ಮತ್ತೊಮ್ಮೆ ಹರಸಾಹಸಪಟ್ಟು ಸ್ಥಳೀಯರ ಸಹಕಾರದಲ್ಲಿ ಹಿಡಿದು ಪ್ಲ್ಯಾಸ್ಟಿಕ್ ಬ್ಯಾರಲ್‌ನಲ್ಲಿ ತುಂಬಿದ್ದಾರೆ. ಸುಮಾರು 14 ಅಡಿ ಉದ್ದದ ಈ ಹೆಬ್ಬಾವು 65 ಕೆಜಿಯಷ್ಟು ತೂಕ ಹೊಂದಿದೆ. . ಕಳೆದ 15 ದಿನದ ಅವಧಿಯಲ್ಲಿಯೇ ಮೂರು ಹೆಬ್ಬಾವುಗಳನ್ನ ಈ ಪ್ರದೇಶದ ಸುತ್ತಮುತ್ತ ಹಿಡಿಯಲಾಗಿದೆ. 2 ವರ್ಷಗಳ ಬಳಿಕ ಇಷ್ಟೊಂದು ದೊಡ್ಡ ಗಾತ್ರದ ಹೆಬ್ಬಾವು ಪತ್ತೆಯಾಗಿದ್ದು ಹಾವನ್ನ ಸುರಕ್ಷಿತವಾಗಿ ಹಿಡಿದು ಅಣಶಿ ಅರಣ್ಯ ಪ್ರದೇಶದಲ್ಲಿ ಬಿಡೋದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Please follow and like us:
error