ಬಿತ್ತನೆ ಬೀಜ, ಗೊಬ್ಬರ ನಿಗದಿತ ಬೆಲೆಯಲ್ಲಿ ಮಾರಾಟಕ್ಕೆ ಕ್ರಮ ಕೈಗೊಳ್ಳಿ : ಕರಡಿ ಸಂಗಣ್ಣ


ಕೊಪ್ಪಳ, : ಕೊಪ್ಪಳ ಜಿಲ್ಲೆಯಲ್ಲಿ ಮುಂಗಾರು ಬಿತ್ತನೆ ಮತ್ತು ಭತ್ತದ ನಾಟಿ ಚುರುಕಾಗಿರುವುದರಿಂದ ರಾಸಾಯನಿಕ ಗೊಬ್ಬರ ಬಳಕೆಯ ಬೇಡಿಕೆ ಹೆಚ್ಚಾಗಿದ್ದು, ಶೀಘ್ರವಾಗಿ ಗೊಬ್ಬರವನ್ನು ಬೇಡಿಕೆಗಿಂತ ಹೆಚ್ಚಾಗಿ ಆಮದು ಮಾಡಿಕೊಂಡು ನಿಗದಿತ ಬೆಲೆಯಲ್ಲಿ ಮಾರಾಟಕ್ಕೆ ಕ್ರಮ ಕೈಗೊಳ್ಳಿ ಎಂದು ಸಂಸದ ಕರಡಿ ಸಂಗಣ್ಣ ಅಧಿಕಾರಿಗಳಿಗೆ ಸೂಚನೆ ನೀಡಿದರು.  
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗುರುವಾರದಂದು ಆಯೋಜಿಸಲಾಗಿದ್ದ 2019-20ನೇ ಸಾಲಿನ 4ನೇ ತ್ರೆöÊಮಾಸಿಕ ಮತ್ತು 2020-21ನೇ ಸಾಲಿನ 1ನೇ ತ್ರೆöÊಮಾಸಿಕ ಕೇಂದ್ರ ಹಾಗೂ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನಾ (ಕೊಪ್ಪಳ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ)) ಸಭೆಯ ಅಧ್ಯಕ್ಷೆತೆ ವಹಿಸಿ ಅವರು ಮಾತನಾಡಿದರು.  
ಸೈನಿಕ ಹುಳುವಿನ ಪೀಡೆಯ ನಿಯಂತ್ರಣಕ್ಕಾಗಿ, ಮಣ್ಣಿನ ಆರೋಗ್ಯ ತಪಾಸಣೆ ಮಾಡುವಂತೆ ಸೂಚನೆ ನೀಡಲಾಗಿತ್ತು ಅದರಂತೆ ಮಣ್ಣಿನ ಆರೋಗ್ಯಕ್ಕೆ ತಕ್ಕಂತೆ ಬೆಳೆ ಬೆಳೆಯಲು ಹೇಳಿ ಹಾಗೂ ರೈತರಿಗೆ ಆರೋಗ್ಯ ಕಾರ್ಡ್ ವಿತರಣೆ ಮಾಡಬೇಕು.  ಈ ನಿಟ್ಟಿನಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ಕ್ರಮ ವಹಿಸಬೇಕು.  ಶಾಲಾ ಮಕ್ಕಳಿಗೆ ನೀಡುವ ಪೌಷ್ಠಿಕ ಆಹಾರ, ಕ್ಷೀರಭಾಗ್ಯ ಯೋಜನೆಯಡಿ ಕಳಪೆ ಮಟ್ಟದ ಹಾಲು, ಆಹಾರ ಪೂರೈಕೆಯಾಗುತ್ತಿರುವ ಬಗ್ಗೆ ದೂರುಗಳು ಬರುತ್ತಿದ್ದು, ಅಡುಗೆದಾರರು ಮತ್ತು ಶಾಲೆಯ ಶಿಕ್ಷಕರು ಸೇರಿ ಆಹಾರ ತಯಾರಿಸುವ ಕುರಿತು ಹಾಗೂ ಗುಣಮಟ್ಟದ ಪರಿಶೀಲನೆ ಕುರಿತು ಸಭೆ ನಡಿಸಬೇಕು.  ಅಲ್ಲದೇ ಅಡುಗೆದಾರರಿಗೆ ವಿಶೇಷ ತರಬೇತಿಯನ್ನು ನೀಡಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.  
ಪಶುಪಾಲನ ಇಲಾಖೆಯು ಸಾಧರಪಡಿಸಿದ ಪ್ರಗತಿಯಂತೆ ಕರಳು ಬೆನೆ, ಪಿ.ಪಿ.ಆರ್ ಲಸಿಕಾ, ಕಾಲುಬಾಯಿ ಲಸಿಕೆಯನ್ನು ನೀಡುವುದರ ಜೊತೆಗೆ ಎನ್.ಎ.ಐ.ಪಿ ಕಾರ್ಯಕ್ರಮದಡಿ ಕೇಂದ್ರ ಪುರಸ್ಕೃತ ಯೋಜನೆ ಅಡಿ 14577 ರಾಸುಗಳಿಗೆ ಕೃತಕ ಗರ್ಭಧಾರಣೆ ಮಾಡಿದ ಕುರಿತು ಚರ್ಚೆ ಮಾಡಿದರು.  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಇಲಾಖೆ, ರಾಷ್ಟಿçಯ ಹೆದ್ದಾರಿ ಸೇರಿದಂತೆ ವಿವಿಧ ಯೋಜನೆಗಳ ಕುರಿತು ಸಭೆಯಲ್ಲಿ ಚರ್ಚೆ ಮಾಡಲಾಯಿತು.  
ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪುರ ಮಾತನಾಡಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಯೋಜನೆ ಅಡಿ ಕುಷ್ಟಗಿ ಮತ್ತು ಯಲಬುರ್ಗಾದಲ್ಲಿ ಬಹುಗ್ರಾಮ ಕುಡಿಯುವ ನೀರು ಸರಬಾರಾಜು ಯೋಜನೆ ಪೈಪ್‌ಲೈನ್ ಮಾಡಲು ಕೆಲವು ಕಡೆ ಅರಣ್ಯ ಪ್ರದೇಶದಲ್ಲಿ ಹಾದು ಹೋಗುತ್ತಿದ್ದು, ಅಲ್ಲಿರುವ ಮರಗಳನ್ನು ಕಡಿದು, ಅಲ್ಲಿ ಬೇರೆ ಸಸಿಗಳನ್ನು ನೆಟ್ಟು, ಮರಗಳನ್ನು ಕಡಿದ ಪರಿಹಾರವಾಗಿ ಅರಣ್ಯ ಇಲಾಖೆಗೆ ಸ್ವಲ್ಪ ಹಣವನ್ನು ಸಂದಾಯ ಮಾಡಬೇಕು ಎಂದರು.  
ಕನಕಗಿರಿ ಶಾಸಕ ಬಸವರಾಜ ಧಡೇಸೂಗೂರು ಮಾತನಾಡಿ, ಕನಕಗಿರಿ ತಾಲೂಕಿನಲ್ಲಿಯೂ ಕುಡಿಯುವ ನೀರಿನ ಪೈಪ್‌ಲೈನ್ ಹಾದು ಹೋಗಿದ್ದು, ಈ ಕುರಿತು ಆದಷ್ಟೂ ಬೇಗ ಬಿಲ್ಗಳು ಪಾಸಾಗಬೇಕು ಎಂದರು.  
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಾಕ ಅಧಿಕಾರಿ ರಘುನಂದನ್ ಮೂರ್ತಿ ಮಾತನಾಡಿ, ಮನೆ ಮನೆಗೆ ಗಂಗೆ ಯೋಜನೆ ಅಡಿ ಜಿಲ್ಲೆಯಲ್ಲಿ ಒಟ್ಟು 2 ಲಕ್ಷ ಮನೆಗಳಿಗೆ ನಳಗಳನ್ನು ನೀಡುವ ಗುರಿ ಹೊಂದಿದ್ದು, ಈಗಾಗಲೇ 1 ಲಕ್ಷ ನಳಗಳನ್ನು ನೀಡಲಾಗಿದೆ.  ಹಾಗೇಯೆ ಇನ್ನೂಳಿದ ಗುರಿಯನ್ನು ಪೂರೈಸುವಲ್ಲಿ ನಿರತರಾಗಿದ್ದೆವೆ.  ಅದರ ಜೊತೆಗೆ ಜಿಲ್ಲೆಯಲ್ಲಿ ಉಳಿದ ಭಾಗದಲ್ಲಿ ನೀರನ್ನು ಸರಬರಾಜು ಮಾಡಲು ಸ್ವಲ್ಪ ಕ್ಲೀಷ್ಟಕರವಾಗಿದ್ದು, ಆ ಭಾಗದಲ್ಲಿ ನೀರಿನ ನಲ್ಲಿಗಳನ್ನು ಪೂರೈಕೆ ಮಾಡಲು ಕೊಪ್ಪಳದಲ್ಲಿ 2, ಗಂಗಾವತಿ 3 ಮಲ್ಟಿಲೇವೆಲ್ ಡಿಸೈನ್ ಅಲ್ಲಿ ನೂತನ ಪ್ರೋಜೆಕ್ಟ್ ಮಾಡಬೇಕಾಗುತ್ತದೆ.  ಶಿಕ್ಷಣ ನೀತಿ ಜಾರಿ ಬಂದ ಹಿನ್ನಲೆಯಲ್ಲಿ ವೃತ್ತಿ ಕೌಶಲ್ಯಕೆ ಹೆಚ್ಚಿನ ಆದ್ಯತೆ ನೀಡಬೇಕು.  ಜಿಲ್ಲೆಯಲ್ಲಿ ಶಾಲಾ ಮಕ್ಕಳಿಗಾಗಿ ಕ್ಷಿರಭಾಗ್ಯ ಯೋಜನೆ ಅಡಿಯಲ್ಲಿ ನೀಡುವ ಹಾಲಿನ ಗುಣಮಟ್ಟವನ್ನು ಪರಿಶೀಲನೆ ಮಾಡಬೇಕು, ಜೊತೆಗೆ ಮಕ್ಕಳಿಗೆ ಆಹಾರವನ್ನು ತಯಾರಿಸುವ ಅಡುಗೆದಾರರಿಗೆ ತರಬೇತಿ ನೀಡಬೇಕು.  ಆಹಾರ ಧಾನ್ಯಗಳು ಕಳಪೆ ಗುಣಮಟ್ಟವಿದ್ದಲ್ಲಿ ಎಡಿಪಿ ಅವರಿಗೆ ತಿಳಿಯಪಡಿಸಿ ಬದಲಾವಣೆ ಮಾಡಿಕೊಳ್ಳಬೇಕು ಎಂದರು.  
ಸಭೆಯಲ್ಲಿ ಜಿಲ್ಲಾಧಿಕಾರಿ ಸುರಳ್ಕರ್ ವಿಕಾಸ್ ಕಿಶೋರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

Please follow and like us:
error