ಬಿಡಿ ಸುದ್ದಿ ಸಂಗ್ರಹಗಾರರ ವಿರುದ್ದ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಹೇಳಿಕೆ ಕ್ರಮಕ್ಕೆ ಆಗ್ರಹ

ಕೊಪ್ಪಳ : ಪತ್ರಕರ್ತರಿಗೆ ಭದ್ರತೆ ಹಾಗೂ ಕೆಲ ಕಿಡಿಗೇಡಿಗಳು ಬಿಡಿಸುದ್ದಿಸಂಗ್ರಹಗಾರರ ವಿರುದ್ದ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಶಬ್ದಗಳನ್ನು ಬಳಸಿ ಹರಿಬಿಡುವ ಕ್ರಮಕ್ಕೆ ಆಗ್ರಹಿಸಿ , ಕಾರ್ಯನಿರತ ಪತ್ರಕರ್ತರ ಸಂಘ ಕಾರಟಗಿ ತಾಲ್ಲೂಕ ಘಟಕದಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು., ಇತ್ತಿಚೆಗೆ ಕೆಲ ಕಿಡಿಗೇಡಿಗಳು ಬಿಡಿಸುದ್ದಿಸಂಗ್ರಹಗಾರರ ವಿರುದ್ದ ಸಾಮಾಜಿಕ ಜಾಲತಾಣಗಳಲ್ಲಿ ಅವ್ಯಾಚ ಶಬ್ದಗಳನ್ನು ಬಳಸಿ ಹರಿಬಿಡುತ್ತಿದ್ದು , ಆದ್ದರಿಂದ ಸ್ಥಳೀಯವಾಗಿ ಪತ್ರಿಕೆಗೆ ವರದಿಮಾಡಲು ಕಷ್ಟವಾಗುತ್ತಿದೆ ಮತ್ತು ಭದ್ರತೆ ಇಲ್ಲದಂತಾಗಿದೆ . ಪತ್ರಕರ್ತರಿಗೆ ಜಿಲ್ಲಾಡಳಿತ ಸೂಕ್ತ ರಕ್ಷಣೆ ನೀಡಿ , ಆತ್ಮಸ್ಥರ್ಯ ತುಂಬುವಂತಾಗಬೇಕು ಹಾಗೂ ಕಾರಟಗಿ ತಾಲ್ಲೂಕಿನದ್ಯಂತ ಪತ್ರಕರ್ತರಿಗೆ ಸೂಕ್ತ ಭದ್ರತೆ ನೀಡಿ , ತಪ್ಪಿಸ್ಟರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

Please follow and like us:
error