ಬಿಜೆಪಿ ಸರಕಾರದ ಭವಿಷ್ಯ ನನ್ನ ಕೈಯಲ್ಲಿದೆ- ಹೆಚ್ಡಿಕೆ

ಬೆಳಗಾವಿ  : ಬಿಜೆಪಿ ಸರಕಾರದ ಭವಿಷ್ಯ ನನ್ನ ಕೈಯಲ್ಲಿದೆ ಎನ್ನುವ ಮೂಲಕ ಮಾಜಿ ಸಿಎಂ ಕುಮಾರಸ್ವಾಮಿ ಎಲ್ಲರಲ್ಲಿ 

ಕುತೂಹಲ ಮೂಡಿಸಿದ್ದಾರೆ.  ಬೆಳಗಾವಿಯಲ್ಲಿ ಮಾತನಾಡಿದ ಹೆಚ್ಡಿಕೆ  ಬಿಜೆಪಿ ಸರಕಾರ ಅವಧಿ ಪೂರೈಸುತ್ತಾ ಎಂಬ ಪ್ರಶ್ನೆಗೆ ಹೆಚ್.ಡಿ.ಕೆ ಪ್ರತಿಕ್ರಿಯಿಸುತ್ತಾ ಅದು ನನ್ನ ಕೈಯಲ್ಲಿದೆ. ಬಿಜೆಪಿ ಸರಕಾರ ಇರಬೇಕೊ ಬೇಡವೋ ಎಂಬುದು ನನ್ನ ಕೈಯಲ್ಲಿದೆ ಈಗಿರುವ ಬಿಜೆಪಿ ಸರಕಾರ ತೆಗೆದು ಇನ್ನೊಂದು ಸರಕಾರ ತರಲು ಕೆಲವರು ಭಾವನೆ ಇಟ್ಕೊಂಡಿದ್ದಾರೆ ಅದನ್ನ ಜನತೆ ಅರ್ಥ ಮಾಡ್ಕೋಬೇಕು. ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ದ ಗುಡುಗಿದ ಕುಮಾರಸ್ವಾಮಿ ನಾನು ಅಧಿಕಾರ ಹಿಡಿಯಲು ಕಷ್ಟ ಪಡಲಿಲ್ಲ, ಎರಡು ಭಾರೀ ಅಧಿಕಾರ ನನ್ನ ಮನೆ ಬಾಗಿಲಿಗೆ ಬಂದಿದೆ.ಚುನಾವಣೆಗೆ ಹೋಗಲು ನಾನು ತಯಾರಿಲ್ಲ… ಜನರ ತೆರಿಗೆ ದುಡ್ಡು ಪೋಲಾಗಬಾರದು.ನಾನು ಸೂಕ್ಷ್ಮವಾಗಿ ಹೇಳುತ್ತಿದ್ದೇನೆ ನನಗೆ ಚುನಾವಣೆ ಮುಖ್ಯವಲ್ಲ. ಡಿಸೆಂಬರ್ 5 ರಂದು ಚುನಾವಣೆ ನಡೆದು ಬಿಜೆಪಿ ಸರಕಾರ ಹೋಗುತ್ತೇ ಅಂತಾ ‌ಸಿದ್ದರಾಮಯ್ಯ ಕನಸು ಕಾಣುತ್ತಿದ್ದಾರೆ. ಅದು ಹಗಲು ಗನಸು  ಅಷ್ಟೇ. ಬಿಜೆಪಿ ಗೆ ಬೆಂಬಲಿವುದೆಯಾ ಎನ್ನುವ ಪ್ರಶ್ನೆಗೆ  ಡಿಸೆಂಬರ್ ವರೆಗೂ ಕಾದು ನೋಡಿ ಎಂದರು .

Please follow and like us:
error