ಬಿಜೆಪಿ ವಿಪ್ ಉಲ್ಲಂಘಿಸಿದ ಆರು ಬಿಜೆಪಿ ಜಿ. ಪಂ. ಸದಸ್ಯರ ಸದಸ್ಯತ್ವ ರದ್ಧತಿಗೆ ದೂರು


ಕೊಪ್ಪಳ:- ಬಿಜೆಪಿ ಕೊಪ್ಪಳ ಜಿಲ್ಲಾ ಅಧ್ಯಕ್ಷರಾದ ದೊಡ್ಡನಗೌಡ ಪಾಟೀಲ್ ಅವರು ಬಿಜೆಪಿ ರಾಜ್ಯಧ್ಯಕ್ಷರಾದ ನಳಿನ ಕುಮಾರ ಕಟೀಲ ಅವರ ಆದೇಶದ ಮೇರೆಗೆ ಇಂದು ಬಿಜೆಪಿ ಪಕ್ಷದ ಆರು ಜಿಲ್ಲಾ ಪಂಚಾಯತಿ ಸದಸ್ಯರು ಕೊಪ್ಪಳ ಜಿಲ್ಲಾ ಪಂಚಾಯತ ಚುನಾವಣೆಯಲ್ಲಿ ಪಕ್ಷದ ವಿಪ್ ಉಲ್ಲಂಘಿಸಿ ಕಾಂಗ್ರೆಸಗೆ ಬೆಂಬಲಿಸಿದ ಭಾರತೀಯ ಜನತಾ ಪಕ್ಷದ ಆರು ಜಿಲ್ಲಾ ಪಂಚಾಯತಿ ಸದಸ್ಯರಾದ
1) ಪ್ರೇಮಾ ಈರಪ್ಪ ಕುಡಗುಂಟಿ
2) ವಿಜಯಕುಮಾರ್ ಲಮಾಣಿ
3) ಜೈನರ ಶರಣಮ್ಮ ಸಂಗನಗೌಡ ಟೆಂಗುಂಟಿ
4) ಭಾಗ್ಯವತಿ ಮಾಣಿಕ ಬೊಲಾ
5) ಸಿ.ವಿಜಯಲಕ್ಷ್ಮಿ ಪಲ್ಲೇದ ಕಡೂರ
6) ಭಾವಿಮನಿ ನೀಲಮ್ಮ ಅಡಿವೆಪ್ಪ ಬಂಡಿ
ಮೆಲ್ಕಾಣಿಸಿದ ಸದಸ್ಯರನ್ನು ಪಕ್ಷಾಂತರ ನಿಷೇಧ ಕಾಯ್ದೆ ಅಡಿ ಅವರ ಸದಸ್ಯತ್ವವನ್ನು ರದ್ದು ಮಾಡಬೇಕೆಂದು ಕೊಪ್ಪಳ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ದೊಡ್ಡನಗೌಡ ಪಾಟೀಲ ಇವರು ಇಂದು ಜಿಲ್ಲಾ ಪಂಚಾಯತಿ ಸಿಇಓ ರಘುನಂದನ ಮೂರ್ತಿ ಇವರಿಗೆ ಲಿಖಿತ ದೂರನ್ನು ನೀಡಲಾಯಿತು, ಹಾಗೂ ಕೊಪ್ಪಳ ಜಿಲ್ಲಾ ಪಂಚಾಯತಿ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯಾಗಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಇಟಗಿ ಜಿ.ಪಂ.ಕ್ಷೇತ್ರದ ಶ್ರೀಮತಿ ಗಂಗಮ್ಮ ಈಶಣ್ಣ ಗುಳಗಣ್ಣವರ್ ಇವರು ಸಹ ಪ್ರತ್ಯೇಕವಾಗಿ ದೂರನ್ನು ನೀಡಿ ಚುನಾವಣೆಯಲ್ಲಿ ಅಭ್ಯರ್ಥಿ ಯಾದ ನನಗೆ ಬಿಜೆಪಿ ಪಕ್ಷದ ಆರು ಜನ ಸದಸ್ಯರು ನನ್ನ ವಿರುದ್ದ ಮತದಾನ ಮಾಡಿದ್ದಾರೆ ಆದಕಾರಣ ಈ ಆರು ಜನ ಸದಸ್ಯರ ಸದಸ್ಯತ್ವವನ್ನು ರದ್ದು ಮಾಡಬೇಕೆಂದು ದೂರನ್ನು ನೀಡಿದರು, ಈ ಸಂಧರ್ಭದಲ್ಲಿ ಕೊಪ್ಪಳ ಗ್ರಾಮೀಣ ಮಂಡಲ ಅಧ್ಯಕ್ಷ ಪ್ರದೀಪ ಹಿಟ್ನಾಳ, ಮಂಡಲ ಪ್ರಧಾನ ಕಾರ್ಯದರ್ಶಿ ಪಿ,ಬಿ, ಹೀರೆಮಠ ಜಿಲ್ಲಾ ಮಾಧ್ಯಮ ವಕ್ತಾರ ಬಸಲಿಂಗಯ್ಯ ಜಿ ಗದಗಿನಮಠ ಹಾಗೂ ಬಿಜೆಪಿ ಕಾರ್ಯಕರ್ತರು ಇದ್ದರು,

Please follow and like us:
error