ಬಿಜೆಪಿ ಅಭ್ಯರ್ಥಿಗಳ ಪಟ್ಟಿ : ಸಂಗಣ್ಣ ಕರಡಿ ಹೆಸರೇಕೆ ಇಲ್ಲ ?

Koppal ಲೋಕಸಭಾ ಚುನಾವಣೆಗೆ ಬಿಜೆಪಿ ತನ್ನ ಮೊದಲ ಪಟ್ಟಿಯನ್ನು ಪ್ರಕಟಿಸಿದೆ. ಪ್ರಧಾನಿ ನರೇಂದ್ರ ಮೋದಿ ಉತ್ತರ ಪ್ರದೇಶದ ವಾರಣಾಸಿ, ರಾಜನಾಥ್ ಸಿಂಗ್ ಲಕ್ನೋ, ನಿತಿನ್ ಗಡ್ಕರಿ ನಾಗ್ಪುರದಿಂದ ಸ್ಪರ್ಧಿಸಲಿದ್ದಾರೆ. ವಿಕೆ ಸಿಂಗ್ ಗಾಜಿಯಾಬಾದ್, ಹೇಮಮಾಲಿನಿ ಮಥುರಾ, ಸಾಕ್ಷಿ ಮಹರಾಜ್ ಉನ್ನಾವೋ, ಸ್ಮೃತಿ ಇರಾನಿ ಅಮೇಠಿಯಿಂದ ಸ್ಪರ್ಧಿಸಲಿದ್ದಾರೆ.

ಬೆಳಗಾವಿ – ಸುರೇಶ್ ಅಂಗಡಿ
ಕಲಬರುಗಿ- ಉಮೇಶ್ ಜಾದವ್
ಬಾಗಲಕೋಟೆ- ಪಿ.ಸಿ.ಗದ್ದಿಗೌಡರ್

ಧಾರವಾಡ – ಪ್ರಹ್ಲಾದ್ ಜೋಷಿ
ಹಾವೇರಿ- ಶಿವಕುಮಾರ್ ಉದಾಸಿ
ಬಳ್ಳಾರಿ – ದೇವೇಂದ್ರಪ್ಪ

ಮೈಸೂರು- ಪ್ರತಾಪ್ ಸಿಂಹ
ದಕ್ಷಿಣ ಕನ್ನಡ- ನಳೀನ್ ಕುಮಾರ್ ಕಟೀಲ್
ಹಾಸನ- ಎ ಮಂಜು
ಉಡುಪಿ- ಚಿಕ್ಕಮಗಳೂರು- ಶೋಭಾ ಕರಂದ್ಲಾಜೆ
ಉತ್ತರಕನ್ನಡ -ಅನಂತ್ ಕುಮಾರ್ ಹೆಗ್ಡೆ

ಬೀದರ್ – ಭಗವಂತ ಖೂಬಾ
ಕಲಬುರಗಿ- ಉಮೇಶ್ ಜಾಧವ್
ಚಿತ್ರದುರ್ಗ – ನಾರಾಯಣಸ್ವಾಮಿ
ಶಿವಮೊಗ್ಗ- ಬಿ.ವೈ ರಾಘವೇಂದ್ರ
ತುಮಕೂರು- ಜಿಎಸ್ ಬಸವರಾಜ್

ಬೆಂಗಳೂರು ಕೇಂದ್ರ- ಪಿಸಿ ಮೋಹನ್
ಬೆಂಗಳೂರು ಉತ್ತರ – ಸದಾನಂದ ಗೌಡ
ಚಿಕ್ಕಾಬಳ್ಳಾಪುರ- ಬಚ್ಚೇಗೌಡ
ಚಾಮರಾಜನಗರ – ಶ್ರೀನಿವಾಸ ಪ್ರಸಾದ್

ಚಿಕ್ಕೋಡಿ, ಬೆಂಗಳೂರು ದಕ್ಷಿಣ, ಕೋಲಾರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ರಾಯಚೂರು, ಕೊಪ್ಪಳ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಬಿಜೆಪಿ ಪಟ್ಟಿಯಲ್ಲಿ ಪ್ರಕಟಿಸಿಲ್ಲ.

ಹಾಲಿ ಸಂಸದರಿಗೆ ಟಿಕೇಟ್ ಪಕ್ಕಾ ಎಂದೇ ಹೇಳಲಾಗಿತ್ತು. ಆದರೆ ಕೊಪ್ಪಳದ ಹಾಲಿ ಬಿಜೆಪಿಯ ಸಂಸದ ಕರಡಿ ಸಂಗಣ್ಣನವರ ಹೆಸರು ಪ್ರಕಟಿಸದೇ ಇರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ. ಬಿಜೆಪಿಯಿಂದ ಕೊಪ್ಪಳ ಲೋಕಸಭಾ ಅಭ್ಯರ್ಥಿ ಸ್ಥಾನಕ್ಕೆ ಪ್ರಮುಖ ಹೆಸರು ಶಿಫಾರಸುಗೊಂಡಿದ್ದು ಸಂಗಣ್ಣ ಕರಡಿಯವರದ್ದು. ನಂತರದರಲ್ಲಿ ರಾಷ್ಟ್ರೀಯ ಪರಿಷತ್ತು ಸದಸ್ಯ ಸಿ.ವಿ.ಚಂದ್ರಶೇಖರ ಹೆಸರು ಇದೇ ಎನ್ನಲಾಗಿದೆ. ಒಂದು ಹಂತದಲ್ಲಿ ಈಗಾಗಲೇ ಸಂಗಣ್ಣ ಕರಡಿಯವರಿಗೇ ಟಿಕೇಟ್ ಫೈನಲ್ಲಾಗಿದೆ ಎಂದೇ ಹೇಳಲಾಗುತ್ತಿದೆ. ಬಿಜೆಪಿ ವರಿಷ್ಠರು ಪಟ್ಟಿಯಲ್ಲಿ ಅಧಿಕೃತವಾಗಿ ಪ್ರಕಟಿಸದೇ ಇರುವುದು ಜನತೆಯ ಕುತೂಹಲಕ್ಕೆ ಕಾರವಾಗಿದೆ. ಕಾಂಗ್ರೆಸ್ ನಿಂದ ಯಾರು ಅಭ್ಯರ್ಥಿಗಳಾಗುತ್ತಾರೆ ಎನ್ನುವದನ್ನು ಕಾದು ನೋಡಿ ಬಿಜೆಪಿ ತನ್ನ ಅಭ್ಯರ್ಥಿ ಹೆಸರು ಘೋಷಣೆ ಮಾಡಲಿದೆ ಎಂದೇ ಹೇಳಲಾಗುತ್ತಿದೆ.