ಬಿಜೆಪಿಯವರ ಹೊಲಸು ಕೆಲಸ ಸಾರ್ವಜನಿಕವಾಗಿ ತೋರಿಸಿದ್ದೇವೆ – ನಾಡಗೌಡ

ಕೊಪ್ಪಳ : ಬಿಜೆಪಿಯರು ಹೊಲಸು ಕೆಲಸ ಮಾಡಿದ್ದಾರೆ, ಅವರ ಹೊಲಸು ಕೆಲಸವನ್ನು ನಾವು ಸಾರ್ವಜನಿಕವಾಗಿ ತೋರಿಸಿದ್ದೇವೆ ಅಂತಾ ಬಿಜೆಪಿ ವಿರುದ್ದ ಸಚಿವ ವೆಂಕಟರಾವ್ ನಾಡಗೌಡ ಹೇಳಿದ್ರು. ಕೊಪ್ಪಳದಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಅಪರಾದ ಮಾಡಿದ್ದಾರೆ. ಅವರ ಅಪರಾದವನ್ನು ಮುಚ್ಚಿಹಾಕಲು ನಮ್ಮ ಮೇಲೆ ಆರೋಪ ಹೋರಿಸ್ತಾ ಇದ್ದಾರೆ. ಬಿಜೆಪಿಯವರು ಮಾಡಿದ ತಪ್ಪನ್ನು ಸಿಎಂ ಆಗಿ ಹೇಳಬಾರದಾ..? ಎಂದು ಪ್ರಶ್ನೆಮಾಡಿದ್ರು.ಇನ್ನು ಎಸ್.ಐ.ಟಿ ತನಿಖೆ ಬೇಡಾ ಅಂತಾ ಬಿಜೆಪಿ ನಾಯಕರು ಹೇಳ್ತಾ ಇದ್ದಾರೆ. ಆಗಾದ್ರೆ ಮಹಾರಾಷ್ಟ್ರ ಪೊಲೀಸರನ್ನು ಕರೆದು ತನಿಖೆ ಮಾಡಿಸಬೇಕಾ..? ಬೇರೆ ರಾಜ್ಯದ ಪೊಲೀಸರಿಂದ ತನಿಖೆ ಮಾಡಿಸಿದ್ರೆ ನಿಮಗೆ ಸರಿನಾ..? ಎಂದು ಸವಾಲ್ ಹಾಕಿದ್ರು. ಇನ್ನು ಎಸ್ಐಟಿ ನೀಡುವ ಹಿಂದೆ ಸಿದ್ದರಾಮಯ್ಯನವರ ಪಾತ್ರ ಇಲ್ಲ. ಅವರೇನೂ ನಿಮಗೆ ಫೋನ್ ಮಾಡಿ ಹೇಳಿದ್ರಾ ಎಂದು ಮಾಧ್ಯಗಳಿಗೆ ಪ್ರಶ್ನೆ ಮಾಡಿದ ನಾಡಗೌಡ, ನಮಗೂ ಮತ್ತು ಕಾಂಗ್ರೇಸ್ಗೆ ಜಗಳ ತಂದಿಡಬೇಡಿ ಎಂದ್ರು. ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ವಿರೇಶ ಮಹಾಂತಯ್ಯನಮಠ, ಮೌನೇಶ ಬಡಿಗೇರ ಸೇರಿದಂತೆ ಇತರರು ಉಪಸ್ಥಿತರಿದ್ದರು.

Please follow and like us:
error