ಬಿಜೆಪಿಯಲ್ಲಿ ಬೀಜದ ಹೋರಿಗಳಿಲ್ಲ- ಶಿವರಾಜ್ ತಂಗಡಗಿ

ಕಾರಟಗಿ : ಬಿಜೆಪಿಯಲ್ಲಿ ಬೀಜದ ಹೋರಿಗಳಿಲ್ಲ ಅಲ್ಲಿ ಇರೋದೆಲ್ಲಾ ಕಾಂಗ್ರೆಸ್ , ಜೆಡಿಎಸ್ ಬೀಜಗಳು ನಮ್ಮವರನ್ನೇ ಎತ್ತುಕೊಂಡು ಹೋಗಿ ತಮ್ಮ ಪಕ್ಷದವರು ಅನ್ನುತ್ತಾರೆ ಎಂದು
ಡಿಸಿಸಿ ಅದ್ಯಕ್ಷ ಮಾಜಿ ಸಚಿವ ಶಿವರಾಜ್ ತಂಗಡಗಿ ಕನಕಗಿರಿಯಲ್ಲಿ ವಿವಾದಾಸ್ಪದ ಹೇಳಿಕೆ ನೀಡಿದರು.
ಟ್ರಾಕ್ಟರ್ ರ್ಯಾಲಿಗೆ ಸಂಬಂದಿಸಿದಂತೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ತಂಗಡಗಿ ಕನಕಗಿರಿ ಕ್ಷೇತ್ರಕ್ಕೆ ಶಾಸಕ ಬಸವರಾಜ್ ದಡೆಸುಗೂರು ಕೊಡುಗೆ ಎಂದರೆ ಎಂಎಸ್ ಐಎಲ್ ಲಿಕ್ಕರ್ ಶಾಪ್ ಗಳು, ನಾನು ತಂದ ಯೋಜನೆಗಳನ್ನೇ ತಮ್ಮವು ಎನ್ನುತ್ತಿದ್ದಾರೆ, ನಾನು ಯಾವತ್ತೂ ಸ್ವಜಾತಿಯ ಅಧಿಕಾರಿಗಳನ್ನು ತರಲಿಲ್ಲ ಆದರೆ ಬಸವರಾಜ್ ದಡೆಸೂಗೂರ್ ಆ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ನಿಂದ ಹಮ್ಮಿಕೊಳ್ಳಲಾಗಿರುವ ಪ್ರತಿಭಟನೆಗಳ ಮುಕ್ತಾಯದ ನಂತರ ದೆಹಲಿಯ ಬಾರ್ಡರ್ ಗೆ ಹೋಗುತ್ತೇನೆ ರೈತರ ಹೋರಾಟದ ಜೊತೆ ನಿಲ್ಲುತ್ತೇನೆ.
ಕಾರಟಗಿಯಲ್ಲಿ ಹಮ್ಮಿಕೊಳ್ಳಲಾಗುತ್ತಿರುವ
ಟ್ರಾಕ್ಟರ್ ರ್ಯಾಲಿ ಇಡೀ ರಾಜ್ಯದಲ್ಲಿಯೇ ಮಾದರಿಯಾಗಬೇಕು ದಿ.೧೫ ರಂದು ಬೃಹತ್ ಟ್ರಾಕ್ಟರ್ ರ್ಯಾಲಿಯನ್ನು ಯಶಸ್ವಿಗೊಳಿಸಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಶ್ರೀನಿವಾಸ್ ರೆಡ್ಡಿ ಸೇರಿದಂತೆ ಇತರ ಮುಖಂಡರು ಉಪಸ್ಥಿತರಿದ್ದರು.

Please follow and like us:
error