ಬಿಜೆಪಿಗೆ  ಸುಪ್ರೀಂ ಕೋರ್ಟ್ ಕಾಪಾಳಮೋಕ್ಷ ಮಾಡಿದೆ- ಉಗ್ರಪ್ಪ

ಬಳ್ಳಾರಿ- ಸುಪ್ರೀಂಕೋರ್ಟ್ ಆದೇಶವನ್ನು ಮುಕ್ತ ಕಂಠದಿಂದ ಸ್ವಾಗತ ಮಾಡುತ್ತೇವೆ- ಪಕ್ಷಕ್ಕೆ ದ್ರೋಹ ಮಾಡಿದವರಿಗೆ ಸ್ಪೀಕರ್ ಅನರ್ಹತೆ ಮಾಡಿದ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ- ಸ್ಪೀಕರ್ ಅವರ ಅಧಿಕಾರವನ್ನು ಸಹ ಕೋರ್ಟ್ ಎತ್ತಿ

 ಹಿಡಿದಿದೆ- 17 ಜನರೂ ಸಹ ಜನಾದೇಶ ದ್ರೋಹ ಮಾಡಿದ್ದಾರೆ- ಅವರ ಅರ್ಹತೆಯನ್ನು ಕೋರ್ಟ್ ಎತ್ತಿಹಿಡಿದಿದೆ- ಅವರು ಪುನರ್ ಆಯ್ಕೆ ಆಗೋವರೆಗೂ ಅನರ್ಹತೆ ಅಪ್ಲೈ ಆಗುತ್ತದೆ- ಚುನಾವಣೆಗೆ ಸ್ಪರ್ಧೆ ಮಾಡಬಹುದು ಎಂದು ಕೂಡ ಹೇಳಿದೆ- 17 ಜನರು  ದ್ರೋಹ ಮಾಡಿರೋದನ್ನು ಎತ್ತಿಹಿಡಿದಿದೆ ಕಾನೂನು- ದ್ರೋಹ ಮಾಡಲು ಕಾರಣವಾದ ಆಡಿಯೋವನ್ನು ಸಹ ನಾವು ರಾಷ್ಟ್ರಪತಿಗಳಿಗೆ ನೀಡಿದ್ದೇವೆ- ಆಡಿಯೋದಲ್ಲಿ ಸಿಎಂ ಯಡಿಯೂರಪ್ಪ ಏನೇಲ್ಲಾ ಹೇಳಿದ್ದಾರೆ ಎಂಬುದು ಎಲ್ಲರಿಗೆ ಗೊತ್ತು- ಅನರ್ಹವಾದ 17 ಜನ ದ್ರೋಹ ಮಾಡಿದವರಿಗೆ, ಬಿಜೆಪಿಗೆ  ಸುಪ್ರೀಂ ಕೋರ್ಟ್ ಕಾಪಾಳಮೋಕ್ಷ ಮಾಡಿದೆ- ಬೈ ಎಲೆಕ್ಷನ್ ನಲ್ಲಿ ಜನರೂ ಸಹ ಇವರಿಗೆ ಕಪಾಳ ಮೋಕ್ಷ ಮಾಡುತ್ತದೆ ಎಂಬ ವಿಶ್ವಾಸ ಇದೆ ಎಂದು ಬಳ್ಳಾರಿಯಲ್ಲಿ ಮಾಜಿ ಸಂಸದ ಉಗ್ರಪ್ಪ ಹೇಳಿದ್ದಾರೆ.

Please follow and like us:
error