ಬಾಬರಿ ಮಸೀದಿ ಧ್ವಂಸ ಪ್ರಕರಣ – ಸತ್ಯದ ಪರ ತೀರ್ಪು ಬಂದಿದೆ- ಸಂಗಣ್ಣ ಕರಡಿ

ಸತ್ಯದ ಪರ ತೀರ್ಪು ಬಂದಿದೆ…ಬಾಬರಿ ಮಸೀದಿ ಧ್ವಂಸ ಪ್ರಕರಣದ ಕುರಿತು ಸುದೀರ್ಘ ವಿಚಾರಣೆ ನಡೆಸಿದ ಲಖನೌ ಸಿಬಿಐ ನ್ಯಾಯಾಲಯವು ಇದೊಂದು ಆಕಸ್ಮಿಕ ಘಟನೆ, ಪೂರ್ವನಿಯೋಜಿತ ಎನ್ನುವುದಕ್ಕೆ ಯಾವುದೇ ಪ್ರಬಲ ಸಾಕ್ಷ್ಯಾಧಾರಗಳು ಸಿಗದ ಕಾರಣ ಪ್ರಕರಣದ ಅಷ್ಟೂ ಆರೋಪಿತರನ್ನು  ನಿರ್ದೋಷಿಗಳೆಂದು ನ್ಯಾಯಾಲಯ ತೀರ್ಪು ನೀಡುವ ಮೂಲಕ ಸತ್ಯಕ್ಕೆ ಜಯ ಸಿಕ್ಕಂತಾಗಿದೆ ಎಂದು ಸಂಸದ ಕರಡಿ ಸಂಗಣ್ಣ ಹೇಳಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು ಸುದೀರ್ಘ ಪ್ರಕರಣದ ವಿಚಾರಣೆಯೊಂದು ಸುಖಾಂತ್ಯ ಕಂಡಿದ್ದು ಸಂತಸದ ವಿಷಯ. ನಮ್ಮ ಪಕ್ಷದ ಹಿರಿಯ ನಾಯಕರು ದೋಷಮುಕ್ತ ಆಗಿರುವುದು ಸಂಸತದ ಸಂಗತಿ. ಇಂತಹ ಪ್ರಕರಣಗಳನ್ನು ಜೀವಂತ ಇಟ್ಟು ಅಭಿವೃದ್ಧಿ ಮರೆತಿದ್ದ ಕಾಂಗ್ರೆಸ್ ಗೆ ಈಗಲಾದರೂ ಬುದ್ಧಿ ಬರಬೇಕಿದೆ.  ಕೋರ್ಟ್ ನ ತೀರ್ಪು ಸ್ವಾಗತಾರ್ಹ ಎಂದು ಹೇಳಿದ್ದಾರೆ

Please follow and like us:
error