ಬಾನುವಾರ ಕೊಪ್ಪಳ ಜಿಲ್ಲೆಯಲ್ಲಿ ೪೦ ಪಾಜಿಟಿವ್ ಪ್ರಕರಣಗಳು

ಕೊಪ್ಪಳ : ಜಿಲ್ಲೆಯಲ್ಲಿ ಪಾಜಿಟಿವ್ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಇವತ್ತು ಒಂದೇ ದಿನ ೪೦ ಪ್ರಕರಣಗಳು ದಾಖಲಾಗಿವೆ. ಇದರಿಂದ ಜಿಲ್ಲೆಯಲ್ಲಿ ಒಟ್ಟು ೨೫೦ ಪಾಜಿಟಿವ್ ಪ್ರಕರಣಗಳು ದಾಖಲಾದಂತಾಗಿವೆ. ಇಂದು ಇಬ್ಬರು ಸಾವನ್ನಪಿದ್ದಾರೆ. ೬ ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಹೆಚ್ಚಾಗುತ್ತಿರುವ ಪಾಜಿಟಿವ್ ಪ್ರಕರಣಗಳು ಜನತೆಯಲ್ಲಿ ಆತಂಕ ಮೂಡಿಸಿವೆ. ಇನ್ನೂ ೨೧೧೩ ಜನರ ರಿಜಲ್ಟ್ ಬರುವುದು ಬಾಕಿ ಇದೆ. ನಗರ ಠಾಣೆಯ ಪೋಲಿಸ್ ಪೇದೆಗೂ ಪಾಜಿಟಿವ್ ಬಂದಿದೆ ಎಂದು ಹೇಳಲಾಗುತ್ತಿದೆ. ಆದರೆ‌ಇದನ್ನು ಜಿಲ್ಲಾಧಿಕಾರಿಗಳು ದೃಡಪಡಿಸಿಲ್ಲ.

ಜಿಲ್ಲೆಯಲ್ಲಿ ಈಗ 250 ಕೇಸ್‌ಗಳ ಪೈಕಿ ಆರು ಜನ ಸಾವನ್ನಪ್ಪಿದ್ದಾರೆ. 104 ಜನ ಗುಣಮುಖರಾಗಿದ್ದಾರೆ. 138 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೂ ಜಿಲ್ಲೆಯಲ್ಲಿ 8 ಜನ ಸೋಂಕಿತರು ಸಾವನ್ನಪ್ಪಿದ್ದಾರೆ.

Please follow and like us:
error