ಬಾನಂಗಳಕೆ ಬಿ.ಎ.ಸನದಿ

*ಜನಜೀವಾಳ ಜಾಲ:*
ಮನೆಯಲ್ಲಿ ‘ಬಾಬಾ ಸಾಹೇಬ ಅಹಮದ್ ಸಾಹೇಬ ಸನದಿ’ ಎಂಬ ತೊಟ್ಟಿಲ ಹೆಸರಿನ ಖ್ಯಾತ ಕವಿ, ಸಾಹಿತಿ ‘ಬಿ.ಎ ಸನದಿ’,ಒಳ್ಳೆಯ ವಾಗ್ಮಿ,, ಅನುವಾದಕಾರ, ಮಕ್ಕಳ ಸಾಹಿತ್ಯದಲ್ಲಿ ನಿಷ್ಣಾತರಾದ ಜನಜೀವಾಳದ ಒಡನಾಡಿ ಇದು ನಮ್ಮನ್ನಗಲಿದ್ದಾರೆ.

ನಾಟಕ ರಚನಾಕಾರ, ಹಾಗೂ ನಿರ್ದೇಶಕರಾಗಿದ್ದ
ಬಿ. ಎ. ಸನದಿ,ಜನನ
ಬಾಬಾ ಸಾಹೇಬ ಅಹಮದ್ ಸಾಹೇಬ ಸನದಿ’ ತಂದೆಯವರ ಹೆಸರು ‘ಅಹಮದ್‌ ಸಾಹೇಬ’, ತಾಯಿ ‘ಆಯಿಶಾಬಿ’. ಮಗ ‘ನಿಸಾರ’
೧೯೩೩ ಅಗಸ್ಟ್, ೧೮ ರಂದು ಬೆಳಗಾವಿ ಜಿಲ್ಲೆಯ ಶಿಂದೊಳ್ಳಿ ಗ್ರಾಮದಲ್ಲಿ ಜನಿಸಿದ್ದರು.
ಆಕಾಶವಾಣಿಯಲ್ಲಿ ಯಕ್ಷಗಾನಕ್ಕೆ ಒಂದು ಸ್ಥಾನ ಕಲ್ಪಿಸಿಕೊಟ್ಟರು.ಮರಾಠಿ ಸಾಹಿತ್ಯದ ಒಂದು ಜನಪ್ರಿಯ ನಾಟಕವನ್ನು ಕನ್ನಡಕ್ಕೆ ಅನುವಾದಿಸಿದರು. ಆಕಾಶವಾಣಿಯಲ್ಲಿ ಕುಟುಂಬ ಕಲ್ಯಾಣ ಕಾರ್ಯಕ್ರಮಾಧಿಕಾರಿಯಾಗಿಕೆಲಸ ನಿರ್ವಹಿಸಿದ್ದರು.
ವಿದ್ಯಾಭ್ಯಾಸ
ಪ್ರಾಥಮಿಕ ಶಿಕ್ಷಣ ಹುಟ್ಟೂರು ಶಿಂದೊಳ್ಳಿಯಲ್ಲಿ.
೧೯೫೪ ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಪದವಿ ಪಡೆದರು. ೧೯೭೨ ರಲ್ಲಿ ಶಿವಾಜಿ ವಿಶ್ವವಿದ್ಯಾಲಯದಿಂದ ಕನ್ನಡ ಹಾಗು ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದರು.
ಮುಂಬಯಿ ಆಕಾಶವಾಣಿಯಲ್ಲಿ ಅಧಿಕಾರಿಯಾಗಿದ್ದರು. ಸನದಿಯವರೇ ಬರೆದು ನಿರ್ದೇಶಿಸಿದ, ‘ಗಂಡ ಹೆಂಡತಿ’ ರೇಡಿಯೋ ನಾಟಕ,ಬಹಳ ಹೆಸರುವಾಸಿಯಾಯಿತು. ಕವಿ,ಲೇಖಕ,ನಾಟಕ ಕರ್ತ, ನಿರ್ದೇಶಕ, ಒಳ್ಳೆಯ ಅನುವಾದಕ, ಕನ್ನಡ ಪರಿಚಾರಕ,
ಕರ್ನಾಟಕ ವಿಶ್ವ ವಿದ್ಯಾಲಯದ ಗೌರವ ಡಾಕ್ಟರೇಟ್. * ಸಿರಿಗನ್ನಡ ಗೌರವ ಪ್ರಶಸ್ತಿ. * ಕನ್ನಡ ಸಾಹಿತ್ಯ ಪರಿಷತ್ತಿನ ಸನ್ಮಾನ ಹಾಗು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ. * ಸಾಧನ ಶಿಖರ ಪ್ರಶಸ್ತಿ.(೨೦೧೪)
*ಸನ್ಮಾನಗಳು*
ಸನ್. ೧೯೬೨ ರಲ್ಲಿ, ತಾಜ್ ಮಹಲ್ (ಕವನಸಂಗ್ರಹ) ಕ್ಕೆ, ರಾಜ್ಯ ಸರಕಾರದ ಪ್ರಶಸ್ತಿ
ಸನ್. ೧೯೬೭ ರಲ್ಲಿ, ಪ್ರತಿಬಿಂಬ (ಕವನ ಸಂಗ್ರಹ) ಕ್ಕೆ, ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ
ಸನ್. ೧೯೬೯ ರಲ್ಲಿ, ಧ್ರುವಬಿಂದು (ಕವನ ಸಂಗ್ರಹ) ಕ್ಕೆ, ಭಾರತ ಸರಕಾರದ ಪ್ರಶಸ್ತಿ
ಸನ್.೧೯೮೪ ರಲ್ಲಿ, ಇಲ್ಲಿ ಸಲ್ಲುವರು (ವಚನ ವಿಮರ್ಶೆ) ಗೆ, ಕಾವ್ಯಾನಂದ ಪುರಸ್ಕಾರ ಹಾಗು ಇಳಕಲ್ಲದ ಚಿತ್ತರಗಿ ಸಂಸ್ಥಾನ ಮಠ ದ ವೀರಶೈವ ಸಾಹಿತ್ಯ ಪ್ರಶಸ್ತಿ
ಸನ್. ೧೯೯೫ರಲ್ಲಿ ೧೯೯೨ ರಲ್ಲಿ, ಸಮಗ್ರ ಸಾಹಿತ್ಯ ಕ್ಕೆ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
ಸಮಗ್ರ ಸಾಹಿತ್ಯ ; ಕನ್ನಡ ಸಾಹಿತ್ಯ ಪರಿಷತ್ತಿನ ಸನ್ಮಾನ ಹಾಗು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ
ಸನ್. ೧೯೯೧ ರಲ್ಲಿ ದೆಹಲಿ ಕನ್ನಡಿಗ ಪರವಾಗಿ ಶ್ರೇಷ್ಠ ಹೊರನಾಡ ಕನ್ನಡಿಗ ಪ್ರಶಸ್ತಿ.
ಡಾ . ಗೌರೀಶ ಕಾಯ್ಕಿಣಿ ಯವರಿಂದ ‘ಮಾನವ್ಯ ಕವಿ’ ಎಂದು ಬಿರುದಾಂಕಿತರಾದರು.
ಮುಂಬಯಿ ನ ಶ್ರೀ ನಾರಾಯಣ ಗುರು ಪ್ರಶಸ್ತಿ,
ಗೋರುರು ಪ್ರತಿಷ್ಠಾನ ಸಾಹಿತ್ಯ ಪ್ರಶಸ್ತಿ.
ಭೂಸನೂರ ಮಠ ಪ್ರತಿಷ್ಠಾನ ಪ್ರಶಸ್ತಿ .
ಕರ್ನಾಟಕ ವಿಶ್ವ ವಿದ್ಯಾಲಯದ ಗೌರವ ಡಾಕ್ಟರೇಟ್.
ಸಿರಿಗನ್ನಡ ಗೌರವ ಪ್ರಶಸ್ತಿ.
ಸಾಧನ ಶಿಖರ ಪ್ರಶಸ್ತಿ.(೨೦೧೪)
2015ನೇ ಸಾಲಿನ ‘ಪಂಪ ಪ್ರಶಸ್ತಿ’೩

ಅವರ ನಿಧನಕ್ಕೆ ಜನಜೀವಾಳ ಕಂಬನಿ ಮಿಡಿಯುತ್ತದೆ. ಅವರ ಅಂತ್ಯಕ್ರಿಯೆ ಸಿಂದೊಳ್ಳಿಯಲ್ಲಿ ಸಂಜೆ ೫ ಗಂಟೆಗೆ ಜರುಗಲಿದೆ.

ನಾಗೇಶ್ ಜಿ.ನಾಯಕ್

Please follow and like us:
error