ಬಾಗಲಕೋಟೆ ಸ್ವಯಂಪ್ರೇರಿತ ಲಾಕ್ ಡೌನ್

ಬಾಗಲಕೋಟೆ: ಕರೋ‌ನಾ ಪ್ರಕರಣಗಳು ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬಾಗಲಕೋಟೆ ಸ್ವಯಂಪ್ರೇರಿತ ಲಾಕಡೌನ್ ಗೆ ವ್ಯಾಪಾರಿಗಳು ಮುಂದಾಗಿದ್ದಾರೆ. ಈ ಕುರಿತು ಕೆಲವು ವ್ಯಾಪಾರಿ ಸಂಘಟನೆಗಳು ನಿರ್ಧರಿಸಿದ್ದು ಲಾಕಡೌನ್ ಗೆ ಮುಂದಾಗಿದ್ದಾರೆ. ಬಾಗಲಕೋಟೆ ಕ್ಲಾಥ್ ಮರ್ಚಂಟ್ ಅಸೋಶಿಯೇಶನ್, ಬಾಗಲಕೋಟೆ ರೆಡಿಮೇಡ್ ಬಟ್ಟೆಗಳ ವ್ಯಾಪಾರಸ್ಥರ ಸಂಘ, ಬಾಂಡೆ ವ್ಯಾಪಾರಸ್ಥರ ಸಂಘ, ಸ್ಟೇಷನರಿ ವ್ಯಾಪಾರಸ್ಥರ ಸಂಘ, ಕಿರಾಣಿ ವರ್ತಕರ ಸಂಘ, ಸರಾಫ್ ಚಿನ್ನ-ಬೆಳ್ಳಿ ವರ್ತಕರು) ವ್ಯಾಪಾರಸ್ಥರ ಸಂಘದಿಂದ ನಿರ್ಧಾರ ಮಾಡಲಾಗಿದ್ದು
ದಿನಾಂಕ 10-7-2020 ರಿಂದ 25-7-2020 ವರೆಗೆ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 02.00 ವರೆಗೆ ಮಾತ್ರ ಅಂಗಡಿ- ಮುಂಗಟ್ಟುಗಳನ್ನು ತೆರೆಯಲು ವ್ಯಾಪಾರ ವಹಿವಾಟು ನಡೆಸಲು ನಿರ್ಧರಿಸಿದ್ದಾರೆ. ಜನತೆಯ ಸುರಕ್ಷತೆಗೋಸ್ಕರ ಈ ನಿರ್ಧಾರ ಕೈಗೊಂಡಿರುವುದಾಗಿ
ಕ್ಲಾತ ಮರ್ಚಂಟ್ ಅಧ್ಯಕ್ಷ ರಾಮಕಿಶನಜಿ ಹೇಳಿದ್ದಾರೆ

Please follow and like us:
error