ಬಾಂಬೆ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಾಗಿ- ಕನ್ನಡತಿ ಮಂಜುಳಾ ಚೆಲ್ಲೂರು ಪ್ರಮಾಣವಚನ

ನ್ಯಾಯಮೂರ್ತಿ ಮಂಜುಳಾ ಚಲ್ಲೂರು ಅವರು ಬಾಂಬೆ ಹೈಕೋರ್ಟ್’ನ ಮುಖ್ಯ ನ್ಯಾಯಾಧೀಶೆಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಇವರು ಮುಂಬೈ ಹೈಕೋರ್ಟ್’ನ ಮುಖ್ಯ ನ್ಯಾಯಾಧೀಶರಾಗಿ ನೇಮಕವಾದ 2ನೇ ಮಹಿಳೆಯಾಗಿದ್ದಾರೆ.manjula

ಕರ್ನಾಟಕ ಹೈಕೋರ್ಟ್’ನ ಮೊದಲ ಮಹಿಳಾ ನ್ಯಾಯಮೂರ್ತಿಯಾಗಿ, ಕೇರಳ ಹಾಗೂ ಕೋಲ್ಕತ್ತಾ ಹೈಕೋರ್ಟ್’ನ ಮೊದಲ ಮಹಿಳಾ ಮುಖ್ಯ ನ್ಯಾಯಾಧೀಶರಾಗಿದ್ದರು.ಮಹಾರಾಷ್ಟ್ರ ರಾಜ್ಯಪಾಲ ವಿದ್ಯಾಸಾಗರ್ ರಾವ್ ಅವರು ಚಲ್ಲೂರ್ ಅವರಿಗೆ ಮುಂಬೈನ ರಾಜ ಭವನದಲ್ಲಿ ಪ್ರಮಾಣ ವಚನ ಬೋಧಿಸಿದರು. ಚೆಲ್ಲೂರು ಅವರು 2017ರವರೆಗೆ ನ್ಯಾಯಾಧೀಶೆಯಾಗಿರುತ್ತಾರೆ.1955ರಲ್ಲಿ ಕರ್ನಾಟಕದಲ್ಲಿ ಜನಿಸಿದ ಮಂಜುಳಾ ಅವರು ಕಾನೂನು ಪದವಿ ಪಡೆದ ನಂತರ ವಕೀಲೆಯಾಗಿ ತನ್ನ ವೃತ್ತಿ ಪ್ರಾರಂಭಿಸಿ 1988 ರಲ್ಲಿ ಜಿಲ್ಲಾ ನ್ಯಾಯಾಧೀಶರಾಗಿ ನೇಮಕವಾದರು. ನಂತರ 2000 ರಲ್ಲಿ ಕರ್ನಾಟಕ ಹೈಕೋರ್ಟ್’ನ ಮೊದಲ ಮಹಿಳಾ ನ್ಯಾಯಾಧೀಶರಾಗಿ ನೇಮಕವಾದರು.ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಅಲ್ಲಿನ ಸಚಿವರು, ನ್ಯಾಯಾಧೀಶರು ಪಾಲ್ಗೊಂಡಿದ್ದರು.

Please follow and like us:
error