ಬಸ್ ಗೆ ಸ್ಕೂಟಿ ಡಿಕ್ಕಿ : ತಂದೆ, ಮಗ ಸಾವು

ಗಂಗಾವತಿ : ಗಂಗಾವತಿಯಿಂದ ಬರುತ್ತಿದ್ದ ಬಸ್ ಗೆ ಸ್ಕೂಟಿ ಮುಖಾಮುಖಿ ಡಿಕ್ಕಿಯಾದ ಪರಿಣಾಮ ತಂದೆ ಮತ್ತು ಮಗ ಸ್ಥಳಧಲ್ಲಿಯೇ ಸಾವನ್ನಪ್ಪಿದ ಘಟನೆ ನಡೆದಿದೆ. ಜಂಗಮರ ಕಲ್ಗುಡಿಯಲ್ಲಿ ಘಟನೆ ನಡೆದಿದ್ದು ಮೃತರು ಗಂಗಾವತಿಯ ಜಯನಗರದ ನಿವಾಸಿಗಳೆಂದು ಗುರುತಿಸಲಾಗಿದೆ.

ಜಯನಗರದ ಹನುಮೇಶ ನಾಯಕ೩೫ ತಮ್ಮ ಮಗ ಪವನ್ ಜೊತೆ ತೆರಳುವಾಗ ಈ ದುರ್ಘಟನೆ ಸಂಭವಿಸಿದೆ. ಅಪಘಾತದ ರಭಸಕ್ಕೆ ಇಬ್ಬರೂ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಗಂಗಾವತಿ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Please follow and like us:
error