ಬಸವರಾಜ ದಡೇಸೂಗರ್ ರಿವರ್ಸ್ ಆಪರೇಷನ್ ತಪ್ಪಿಸಿದ್ರಾ ಬಿಜೆಪಿ ನಾಯಕರು ? 

ಕನಕಗಿರಿ ಬಿಜೆಪಿ ಶಾಸಕ ಬಸವರಾಜ ದಡೇಸೂಗರ್ ಜೆಡಿಎಸ್ಗೆ ವದಂತಿ..? ರಿವರ್ಸ್ ಆಪರೇಷನ್ ತಪ್ಪಿಸಿದ ಬಿಜೆಪಿ ನಾಯಕರು..| ಯಡಿಯೂರಪ್ಪ ಬಳಿ ಯಶಸ್ವಿ. ಮಾತುಕತೆ..!

ಕೊಪ್ಪಳ : ಜಿಲ್ಲೆಯ ಕನಕಗಿರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಬಸವರಾಜ ದಡೇಸೂಗರ್ ಅವರು ಮೈತ್ರಿ ಸರ್ಕಾರದ ಜೆಡಿಎಸ್-ಕಾಂಗ್ರೆಸ್ ನಡೆಸಿದ ರಿವರ್ಸ್ ಆಪರೇಷನ್ಗೆ 
ಬಲಿಯಾಗಿದ್ದು, ಸಧ್ಯದಲ್ಲಿಯೇ ಬಿಜೆಪಿ ತೊರೆದು ಜೆಡಿಎಸ್ ಸೇರಲಿದ್ದಾರೆ ಎಂಬ ಸುದ್ದಿಯು ಬಲವಾಗಿ ಹರಿದಾಡಿತ್ತು, ಈ ಬಗ್ಗೆ ಸ್ವತಃ ಶಾಸಕರು ಸಹ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದು, ಮಾಧ್ಯಮಗಳಲ್ಲಿ ಪ್ರಕಟಗೊಂಡಿದ್ದವು.

ಈ ಹಿಂದೆ ಹಲವು ಬಾರಿ ಆಪರೇಷನ್ ಕಮಲ ನಡೆದಾಗ, ಇವರು ಕಾಂಗ್ರೆಸ್ ಅಥವಾ ಜೆಡಿಎಸ್ ಸೇರುತ್ತಾರೆ ಎಂಬ ವದಂತಿಗಳು ಹರಡಿದ್ದವು, ಅದಕ್ಕೆ ಪುಷ್ಠಿ ನೀಡುವುಂತೆ ಶಾಸಕ ದಡೇಸೂಗರ್ ಸಹ ಸಿಎಂ ಕುಮಾರಸ್ವಾಮಿ ಹಾಗೂ ಸಚಿವ ವೆಂಕಟರಾವ್ ನಾಡಗೌಡ ಬಳಿ ಹೆಚ್ಚು ಕಾಣಿಸಿಕೊಂಡಿದ್ದರು. ಶುಕ್ರವಾರ ಬೆಳಿಗ್ಗೆ ಸಚಿವ ನಾಡಗೌಡ ಅವರನ್ನು ಸಿಂಧನೂರಿನಲ್ಲಿ ಭೇಟಿ ಕೂಡಾ ಮಾಡಿದ್ದು ಖಚಿತವಾಗಿತ್ತು. ಅದೇ ದಿನ ಬೆಂಗಳೂರಲ್ಲಿ ರಾಜಿನಾಮೆ ನೀಡಲು ಸಿದ್ಧತೆಯನ್ನು ಮಾಡಿಕೊಂಡಿದ್ದರು ಎಂದು ಹೇಳಲಾಗಿತ್ತು. ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿ, ಎಚ್ಛತ್ತುಕೊಂಡ ಬಿಜೆಪಿ ಹೈ-ಕಮಾಂಡ್ ರಿವರ್ಸ್ ಆಪರೇಷನ್ ತಡೆಯಲು ಕಾರ್ಯತಂತ್ರವನ್ನು ರೂಪಿಸಿದ್ದರಿಂದ ಹಾಗೂ ಮಾಜಿ ಸಚಿವ ಗೊವೀಂದ ಕಾರಜೋಳ, ಶ್ರೀರಾಮುಲು, ಸಂಸದ ಸಂಗಣ್ಣ ಕರಡಿ, ಶಾಸಕರಾದ ಹಾಲಪ್ಪ ಆಚಾರ್, ಪರಣ್ಣ ಮುನವಳ್ಳಿ, ಅವರು ಶಾಸಕ ಬಸವರಾಜ ದಡೇಸಗೂರ್ ಅವರನ್ನು ಮಾಜಿ ಸಿಎಂ ಯಡಿಯೂರಪ್ಪ ಬಳಿ ಶನಿವಾರ ರಾತ್ರಿ ಕರೆದುಕೊಂಡು ಬಂದು ಮಾತುಕತೆ ಮೂಲಕ ರಿವರ್ಸ್ ಆಪರೇಷನ್ ತಡೆಯಲು ಯಶಸ್ವಿಯಾಗಿದ್ದಾರೆಂದು ಹೇಳಲಾಗುತ್ತದೆ.ಶಾಸಕರನ್ನು ಕರೆದುಕೊಂಡು ಬಿಜೆಪಿ ಮುಖಂಡರಾದ ನಾಗರಾಜ ಬಿಲ್ಗಾರ್, ಸಂಸದರ ಪುತ್ರ ಅಮರೇಶ ಕರಡಿ ಅವರು ಪಕ್ಷದ ಹೈಕಮಾಂಡ್ ಬಳಿ ಹೋಗಿದ್ದರು ಎಂಬ ಮಾಹಿತಿ ಬಂದಿದೆ, ಹಿರಿಯ ಮುಖಂಡರೊಂದಿಗೆ ನಡೆಸಿದ ಸಂಧಾನ ಮಾತುಕತೆಯಿಂದಾಗಿ ಮೈತ್ರಿ ಸರ್ಕಾರ ನಡೆಸಿದ್ದ ರಿವರ್ಸ್ ಆಪರೇಷನ್ ವಿಫಲವಾಗಿದೆ ಎಂದು ಹೇಳಲಾಗುತ್ತಿದೆ.

ಕನಕಗಿರಿಯ ಬಿಜೆಪಿ ಶಾಸಕ ಬಸವರಾಜ ದಢೇಸಗೂರ ಅವರನ್ನು ಜೆಡಿಎಸ್-ಕಾಂಗ್ರೆಸ್ ರಿವರ್ಸ್ ಆಪರೇಷನ್ ಮಾಡಲು ಎಲ್ಲ ತಯಾರಿ ನಡೆಸಿದ್ದಾರೆ ಎಂಬ ವದಂತಿಗೆ ಶಾಸಕರು ಈ ಕುರಿತು ಅಡ್ಡಗೋಡೆ ಮೇಲೆ ದೀಪ ಇಟ್ಟವರಂತೆ ಮಾತನಾಡಿದ್ದೂ ಅನೇಕ ಊಹಾಪೋಹಕ್ಕೆ ಕಾರಣವಾಗಿತ್ತು, ಕೊನೆಗೂ ಜೆಡಿಎಸ್ ಬಾಗಿಲು ಸೇರುವ ಸಂದರ್ಭದಲ್ಲಿ ಬಿಜೆಪಿ ಹೈಕಮಾಂಡ್ ಎದುರು ಸಂಧಾನ ಮಾಡಿಸುವ ಮೂಲಕ ರಿವರ್ಸ್ ಆಪರೇಷನ್ ತಪ್ಪಿಸಲಾಗಿದೆ ಎಂದು ಬಿಜೆಪಿ ಪಕ್ಷದ ಮೂಲಗಳು ತಿಳಿಸಿವೆ.ಕ್ಷೇತ್ರದ ಜನರು ತಮಗೆ ಆಶೀರ್ವಾದ ಮಾಡಿದ್ದು ಬಿಜೆಪಿಗೆ, ಆ ಪಕ್ಷದಲ್ಲಿ ನಾನು ಇದ್ದು, ಶಾಸಕನಾಗಿ ಕೆಲಸ ಮುಂದುವರೆಸುತ್ತೇನೆ, ಬಿಜೆಪಿಯಲ್ಲೇ ಇರುತ್ತೇನೆ ಎಂದು ಹೇಳಿದ್ದ ಶಾಸಕ ಬಸವರಾಜ್ ದಢೇಸೂಗುರು ಅವರು ತಮ್ಮ ಮಾತನ್ನು ಉಳಿಸಿಕೊಂಡಂತೆ ಕಾಣಿಸುತ್ತಿದ್ದು, ಈ ಮಧ್ಯೆದಲ್ಲಿ ನಡೆದಿರುವ ಬೆಳವಣಿಗೆಗಳು ಜಿಲ್ಲೆಯ ಜನರಲ್ಲಿ ಬಹಳ ಕುತೂಹಲವನ್ನು ಮೂಡಿಸಿದ್ದವು, ಸಧ್ಯದ ರಾಜ್ಯದಲ್ಲಿನ ರಾಜಕೀಯ ಬೆಳವಣಿಗೆಗಳು ಹಾಗೂ ಶಾಸಕ ಬಸವರಾಜ ದಡೇಸೂಗರ್ ಅವರನ್ನು ಸುತ್ತಿಕೊಂಡಿದ್ದ ವದಂತಿಗಳಿಗೆ ತಿಲಾಂಜಲಿ ನೀಡಲಾಗಿದೆ ಎಂದು ಹೇಳಲಾಗುತ್ತದೆ.

ಎಂದು ಬಿಜೆಪಿಯ ಮುಖಂಡ ಅಮರೇಶ್ ಕರಡಿ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ. ಈ ಮೂಲಕ ಕನಕಗಿರಿಯ ಶಾಸಕ ಬಸವರಾಜ್ ದಡೆಸೂಗುರು ರಿವರ್ಸ್ ಆಪರೇಷನ್ ಗೆ ಒಳಗಾಗಿದ್ದನ್ನು ಖಚಿತಪಡಿಸುವಂತಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

Please follow and like us:
error